
ಬೆಂಗಳೂರು : ತಾಂತ್ರಿಕ ತೊಂದರೆ ಹಿನ್ನೆಲೆಯಲ್ಲಿ ಹವಾ ನಿಯಂತ್ರಿತ ಕಾರಿನಲ್ಲಿ ಉಸಿರುಗಟ್ಟಿ ಮಹಿಳೆ ಮತ್ತು ಆಕೆಯ ಸಂಬಂಧಿಕ ಸಾವನ್ನಪ್ಪಿರುವ ಘಟನೆ ಅನ್ನಪೂರ್ಣೇಶ್ವರಿ ನಗರ ಸಮೀಪದ ಐಟಿಐ ಲೇಔಟ್‌ನಲ್ಲಿ ನಡೆದಿರುವ ಘಟನೆ ತಡವಾಗಿ ಶುಕ್ರವಾರ ಬೆಳಕಿಗೆ ಬಂದಿದೆ.
ಐಟಿಐ ಲೇಔಟ್ ನಿವಾಸಿ 30 ವರ್ಷದ ವಿವಾಹಿತ ಹಾಗೂ 28 ವರ್ಷದ ಆತನ ಸಂಬಂಧಿಕ ಮಹಿಳೆ ಮೃತ ದುರ್ದೈವಿಗಳು. ತಮ್ಮ ಮನೆ ಶೆಡ್‌ನಲ್ಲಿ ರಾತ್ರಿ ಕಾರು ನಿಲ್ಲಿಸಿ ತನ್ನ ಬಂಧುವಿನ ಜತೆ ವಿವಾಹಿತ ವ್ಯಕ್ತಿ ಇದ್ದರು. ಈ ‘ಆಪ್ತ’ ಗಳಿಗೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿ ಅವರಿಬ್ಬರು ಮೃತಪಟ್ಟಿದ್ದು, ಬೆಳಗ್ಗೆ ಕುಟುಂಬದವರು ಕಾರಿನ ಶೆಡ್ ತೆಗೆದಾಗ ಘಟನೆ ಬೆಳಕಿಗೆ ಬಂದಿದೆ.
ಎಸಿ ಆನ್ ಮಾಡಿ ಅವರಿಬ್ಬರು ಕಾರಿನೊಳಗೆ ಸೇರಿದ್ದಾರೆ. ಶೆಡ್‌ನಲ್ಲಿ ಗಾಳಿ ಸಂಚಾರಕ್ಕೆ ತೊಂದರೆ ಅನ್ನಪೂರ್ಣೇಶ್ವರಿ ನಗರ ಸಮೀಪದ ಐಟಿಐ ಲೇಔಟ್‌ನಲ್ಲಿ ಘಟನೆ ಬುಧವಾರ ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಕಾರಿನಲ್ಲಿದ್ದ ಜೋಡಿಗೆ ಅನೈತಿಕ ಸಂಬಂಧವಿದ್ದ ಆರೋಪ ಕಾರಲ್ಲಿ ‘ಆಪ್ತ’ ಗಳಿಗೆಯಲ್ಲಿದ್ದಾಗ ಗಾಳಿಯಾಡದೆ ಸಾವು ಉಂಟಾಗಿ ಕಾರಿನೊಳಗೆ ಕಾರ್ಬನ್ ಮೋನಾಕ್ಸೈಡ್ ಆವರಿಸಿದ ಪರಿಣಾಮ ಅವರ ಜೀವಕ್ಕೆ ಎರವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಎಸಿ ಕಾರು ತಂದ ಆಪತ್ತು?: ಸೆಕೆಂಡ್ ಹ್ಯಾಂಡ್ ಕಾರುಗಳ ಏಜೆಂಟ್ ಆಗಿದ್ದ ವ್ಯಕ್ತಿ, ತನ್ನ ಸಂಬಂಧಿಕ ಮಹಿಳೆ ಜತೆ ‘ಆತ್ಮೀಯತೆ’ ಹೊಂದಿದ್ದರು. ಮೃತ ಮಹಿಳೆಗೂ ವಿವಾಹವಾಗಿತ್ತು ಎಂದು ತಿಳಿದುಬಂದಿದೆ. ಈ ಆಪ್ತ ಸಂಬಂಧ ಹಿನ್ನೆಲೆಯಲ್ಲಿ ಬುಧವಾರ ರಾತ್ರಿ ಮಹಿಳೆ ಜತೆ ಮನೆಗೆ ಬಂದ ಅವರು, ಬಳಿಕ ಕಾರನ್ನು ಶೆಡ್‌ಗೆ ನಿಲ್ಲಿಸಿದ್ದಾರೆ. ಶೆಟರ್ ಎಳೆದು ಕಾರಿನೊಳಗೆ ಸೇರಿದ ಅವರು, ನಂತರ ಕಾರಿನ ಬಾಗಿಲು ಬಂದ್ ಮಾಡಿದ್ದಾರೆ. ನಂತರ ಎಸಿ ಆನ್ ಮಾಡಿ ಅವರಿಬ್ಬರು ಆತ್ಮೀಯವಾಗಿ ಸಮಯ ಕಳೆದಿದ್ದಾರೆ. ಈ ವೇಳೆ ಕಾರಿನ ಇಂಧನ ಸಹ ಖಾಲಿಯಾಗಿತ್ತು ಎಂದು ತಿಳಿದು ಬಂದಿದೆ. ಶೆಡ್ ಹಾಗೂ ಕಾರಿನ ಬಾಗಿಲು ಬಂದ್ ಮಾಡಿದ್ದರಿಂದ ಗಾಳಿ ಸಂಚಾರಕ್ಕೆ ತೊಂದರೆಯಾಗಿದೆ.
ಹೀಗಾಗಿ ಕಾರಿನಲ್ಲಿ ಎಸಿ ಹೊರಸೂಸುತ್ತಿದ್ದ ಕಾರ್ಬನ್ ಮೋನಾಕ್ಸೈಡ್ ಹೊರಗೆ ಹೋಗಲಾಗದಂತೆ ಕಾರಿನೊಳಗೆ ಆವರಿಸಿಕೊಂಡಿದೆ. ಇದರಿಂದ ಅವರಿಬ್ಬರು ವಿಷ ಅನಿಲ ಸೇವಿಸಿ ಉಸಿರುಗಟ್ಟಿ ಕೊನೆ ಯುಸಿ ರೆಳೆದಿರಬಹುದು ಎಂದು ಪೊಲೀಸರು ವಿವರಿಸಿದ್ದಾರೆ. ಗುರುವಾರ ಬೆಳಗ್ಗೆ ಮೃತನ ತಂದೆ ಕಾರು ಶೆಡ್ ತೆರೆದಾಗ ಕಾರಿನೊಳಗೆ ಮೃತದೇಹಗಳು ಪತ್ತೆಯಾಗಿವೆ. ತಕ್ಷಣವೇ ಅವರು ಕಾರಿನ ಕಿಟಕಿ ಗಾಜು ಹೊಡೆದು ರಕ್ಷಣೆಗೆ ಮುಂದಾಗಿದ್ದಾರೆ.
ಆದರೆ ಅಷ್ಟರಲ್ಲಿ ಕಾರಿನಲ್ಲಿದ್ದವರು ಮೃತಪಟ್ಟಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತರ ಕುಟುಂಬದವರ ದೂರು ಆಧರಿಸಿ ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.