ಗಣೇಶ ಹಬ್ಬ ಆಚರಣೆಗೆ ಕರ್ನಾಟಕದಲ್ಲಿನ ಹೊಸ ನಿಯಮಗಳ ಮೇಲೆ ಜನರ ಚಿತ್ತ ನೆಟ್ಟಿದೆ. ಕೋವಿಡ್‌ನಿಂದ ಮೃತಪಟ್ಟ ಬಡವರಿಗೆ 1 ಲಕ್ಷ ರು. ಪರಿಹಾರ ನೀಡಲು ಅಸ್ಸಾಂ ಸರ್ಕಾರ ನಿರ್ಧರಿಸಿದೆ. ಕೋಟಿಗೊಬ್ಬ 3 ರಿಲೀಸ್ ಡೇಟ್ ಬಹಿರಂಗಗೊಂಡಿದೆ. ಟಿ20 ವಿಶ್ವಕ್‌ಗೆ ಭಾರತ ತಂಡ ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ. ರಾಜ್ಯದಲ್ಲಿ ಇನ್ನೂ 2 ದಿನ ಮಳೆ, ಪ್ರವಾಹಕ್ಕೆ ಮುಳುಗಿತು ನ್ಯೂಯಾರ್ಕ್ ಸೇರಿದಂತೆ ಸೆಪ್ಟೆಂಬರ್ 3ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಕೋವಿಡ್‌ನಿಂದ ಮೃತಪಟ್ಟ ಬಡವರಿಗೆ 1 ಲಕ್ಷ ರು. ಪರಿಹಾರ
ಕೋವಿಡ್ 19ನಿಂದಾಗಿ ಸಾವಿಗೀಡಾದ ಬಡ ಕುಟುಂಬದವರ ರಕ್ತ ಸಂಬಂಧಿಗಳಿಗೆ 1 ಲಕ್ಷ ರು. ನೀಡಲು ಅಸ್ಸಾಂ ಸರ್ಕಾರ ಬುಧವಾರ ನಿರ್ಧರಿಸಿದೆ.
Ind vs Eng 4ನೇ ಟೆಸ್ಟ್ ಬಳಿಕ ಟಿ20 ವಿಶ್ವಕಪ್‌ಗೆ ಭಾರತ ತಂಡ ಪ್ರಕಟ
ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಮುಕ್ತಾಯಗೊಂಡ ಬಳಿಕ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಗಣೇಶ ಹಬ್ಬ ಆಚರಣೆಗೆ ಸರ್ಕಾರದ ರೂಲ್ಸ್‌ಗಳೇನು.?
ಇನ್ನೇನು ಗಣೇಶ ಹಬ್ಬ ಬಂದೇ ಬಿಟ್ಟಿದೆ. ಹಬ್ಬದ ಆಚರಣೆಗೆ ಸರ್ಕಾರದಿಂದ ಭರ್ಜರಿ ಸಿದ್ಧತೆ ನಡೆದಿದೆ. ಸೆಪ್ಟೆಂಬರ್ 5 ಕ್ಕೆ ಹಬ್ಬದ ನಿಯಮಗಳು ಹೊರ ಬೀಳಲಿದೆ.
ಕೋಟಿಗೊಬ್ಬ 3 ರಿಲೀಸ್ ಬಗ್ಗೆ ನಿರ್ಮಾಪಕರ ಮಾತು; ರಿಲೀಸ್ ಡೇಟ್ ಇಲ್ಲಿದೆ!
ಸುದೀಪ್ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ರಿಲೀಸ್‌ಗೆ ಸಿದ್ಧವಾಗಿದೆ. ಆದರೆ ಕೊರೋನಾದಿಂದ ರಿಲೀಸ್ ದಿನಾಂಕ ಅನೌನ್ಸ್ ಮಾಡಿರಲಿಲ್ಲ. ಇದೀಗ ಕಿಚ್ಚ ಹುಟ್ಟು ಹಬ್ಬಕ್ಕೆ ಸಿನಿಮಾ ತಂಡ ಅಭಿಮಾನಿಗಳಿಗೆ ರಿಲೀಸ್ ಬಗ್ಗೆ ಗುಡ್ ನ್ಯೂಸ್ ನೀಡಿದೆ. ರಿಲೀಸ್ ಯಾವತ್ತು ಗೊತ್ತಾ?
4 ವರ್ಷ ಹಿಂದಿನ ಡ್ರಗ್ಸ್ ಮತ್ತು ಮನಿ ಲ್ಯಾಂಡರಿಂಗ್ ಕೇಸ್‌ನಲ್ಲಿ ಕನ್ನಡದ ನಟಿ ರಕುಲ್‌ಗೆ ಇಡಿ ವಿಚಾರಣೆ!
ಗಿಲ್ಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ರಕುಲ್ ಪ್ರೀತ್ ಸಿಂಗ್ ಈಗ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿಯೂ ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆ ರಕುಲ್ ಬ್ಯಾಕ್ ಟು ಬ್ಯಾಕ್ ಇಡಿ ವಿಚಾರಣೆಯಲ್ಲಿ ಭಾಗಿಯಾಗುತ್ತಿದ್ದಾರೆ. ಅದೂ ನಾಲ್ಕು ವರ್ಷಗಳ ಹಿಂದೆ ನಡೆದಿರುವ ಘಟನೆಗೆ ಎನ್ನಲಾಗಿದೆ
BMW M8 ಕೂಪ್ ಭಾರತದಲ್ಲಿರುವ ಮೋಸ್ಟ್ ಪವರ್‌ಫುಲ್ ಕಾರು; 3.3 ಸೆಕೆಂಡ್‌ನಲ್ಲಿ 100 ಕಿ.ಮೀ ವೇಗ!
ಶ್ರೀಲಂಕಾ ಪ್ರವಾಸದಲ್ಲಿ ಟೀಂ ಇಂಡಿಯಾ ಮುನ್ನಡೆಸಿದ ಶಿಖರ್ ಧವನ್ ಸದ್ಯ ಐಪಿಎಲ್ ಟೂರ್ನಿ ತಯಾರಿಯಲ್ಲಿದ್ದಾರೆ. ಐಪಿಎಲ್ ಎರಡನೇ ಭಾಗ ಆರಂಭಕ್ಕೂ ಮುನ್ನ ಶಿಖರ್ ಧವನ್ ದುಬಾರಿ ಹಾಗೂ ಐಷಾರಾಮಿ ಕಾರು ಖರೀದಿಸಿ ಎಲ್ಲರ ಗಮನಸೆಳೆದಿದ್ದಾರೆ. ಶಿಖರ್ ಧವನ್ BMW M8 ಕೂಪ್ ಕಾರು ಖರೀದಿಸಿದ್ದಾರೆ. 2.18 ಕೋಟಿ ರೂಪಾಯಿ ಬೆಲೆಯ ಈ ಕಾರು ಹಲವು ವಿಶೇಷತೆ ಹೊಂದಿದೆ.
ರಾಜ್ಯದಲ್ಲಿ ಇನ್ನೂ ಎರಡು ದಿನ ಭಾರೀ ಮಳೆ
ರಾಜ್ಯದಲ್ಲಿ ಸೆಪ್ಟೆಂಬರ್ 5 ಮತ್ತು 6ಕ್ಕೆ ಕರಾವಳಿ ಮತ್ತು ಒಳನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ
'ಇಡಾ' ಚಂಡಮಾರುತದ ಅಬ್ಬರ, ಕಂಡು ಕೇಳರಿಯದ ಪ್ರವಾಹಕ್ಕೆ ಮುಳುಗಿತು ನ್ಯೂಯಾರ್ಕ್.!
ಭೂಲೋಕದ ಸ್ವರ್ಗ ಎನಿಸಿಕೊಂಡಿರುವ ನ್ಯೂಯಾರ್ಕ್, ಕಂಡು ಕೇಳರಿಯದ ಪ್ರವಾಹಕ್ಕೆ ಸಾಕ್ಷಿಯಾಗಿದೆ. ಮಳೆಯ ಜೊತೆ ಸುನಾಮಿಯಂತೆ ಅಪ್ಪಳಿಸಿದ ಬಿರುಗಾಳಿಗೆ ಇಡೀ ರಾಜ್ಯವೇ ತತ್ತರಿಸಿ ಹೋಗಿದೆ.
ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಆಚರಣೆ ಹೇಗಿರಲಿದೆ : ಸಿಎಂ ಸಭೆ
ಈ ಬಾರಿ ಮೈಸೂರು ದಸರಾ ಆಚರಣೆ ಹೇಗಿರಬೇಕು ಎನ್ನುವ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಪೂರ್ವಸಿದ್ಧತಾ ಸಭೆ ನಡೆಯಲಿದೆ.