
ಬಾಗಲಕೋಟೆ(ಡಿ.31): ಮಾಜಿ ಸಚಿವ ಎಚ್.ವೈ. ಮೇಟಿ ಲೈಂಗಿಕ ಹಗರಣ ಪ್ರಕರ ಣದ ಸಂತ್ರಸ್ತೆ ವಿಜಯಲಕ್ಷ್ಮಿ ಸರೂರ್ ನೀಡಿರುವ ದೂರಿನಲ್ಲಿನ ಮೊದಲ ಆ ರೋಪಿ ಡಿಎಆರ್ ಪೇದೆ ಸುಭಾಷ್ ಮುಗಳಖೋಡ ರನ್ನು ಸೇವೆಯಿಂದ ಎಸ್ಪಿ ಎಂ.ಎನ್. ನಾಗರಾಜ್ ಅಮಾನತು ಮಾಡಿದ್ದಾರೆ.
ಸುಭಾಷ್ ನಾಲ್ವರನ್ನು ಮನೆಗೆ ಕಳುಹಿಸಿ ನನ್ನನ್ನು ಅಪಹರಣ ಮಾಡಿ ಶಾಸಕ ಮೇಟಿ ವಿರುದ್ಧ ಹೇಳಿಕೆ ಪಡೆದುಕೊಂಡಿದ್ದರು. ಅಲ್ಲದೆ, ನನ್ನ ಮೇಲೆ ಹಲ್ಲೆ ಕೂಡ ಮಾಡಲಾಗಿತ್ತು ಎಂದಿದ್ದ ವಿಜಯಲಕ್ಷ್ಮಿ, ಇಲ್ಲಿನ ನವನಗರ ಠಾಣೆಯಲ್ಲಿ ಇತ್ತೀಚೆಗೆ ದೂರು ದಾಖಲಿಸಿದ್ದರು. ಈ ದೂರಿನಲ್ಲಿ ಪೇದೆ ಸುಭಾಷ್ ಮೊದಲ ಆರೋಪಿ. ಅಂದಿನಿಂದಲೇ ಪೊಲೀಸರು ಸುಭಾಷ್‌ಗಾಗಿ ಬಲೆ ಬೀಸಿದ್ದರು. ಆದರೆ, ಸುಭಾಷ್ ಈವರೆಗೂ ತಲೆಮರೆಸಿಕೊಂಡಿದ್ದಾರೆ. ಸಿಐಡಿ ತನಿಖೆ ನಡೆಯುತ್ತಿದ್ದರೂ ಸುಭಾಷ್ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿಯೇ ಸದ್ಯ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.
ಆ.19ರಿಂದ ಸುಭಾಷ್ ಅನಾರೋಗ್ಯದ ನಿಮಿತ್ತ ರಜೆ ಮೇಲೆ ತೆರಳಿದ್ದರು. ಈವರೆಗೂ ಸೇವೆಗೆ ಹಾಜರಾಗಿಲ್ಲ. ಅನಧಿಕೃತವಾಗಿ ಗೈರು ಹಾಜರಾಗಿದ್ದಾರೆ. ಅಲ್ಲದೆ, ನವನಗರ ಠಾಣೆಯಲ್ಲಿ ಕಲಂ 143, 341, 307, 354(ಬಿ), 365, 504, 506, 109, 120(ಬಿ) ಹಾಗೂ 149ರಡಿ ತಪ್ಪೆಸಗಿದ್ದಾರೆ. ಸರ್ಕಾರಿ ನೌಕರನಾಗಿ ಅಪರಾಧ ಕೃತ್ಯದಲ್ಲಿ ಭಾಗಿಯಾಗಿ ದುರ್ನಡತೆ, ಅಶಿಸ್ತು, ನಿರ್ಲಕ್ಷ್ಯತನ ಹಾಗೂ ಬೇಜವಾಬ್ದಾರಿ ಪ್ರದರ್ಶಿಸಿದ್ದಾರೆ. ಹೀಗಾಗಿ ಇಲಾಖೆ ವಿಚಾರಣೆಯನ್ನು ಬಾಕಿಯಿಟ್ಟು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಆದೇಶಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.