
ಬೆಂಗಳೂರು(ಡಿ.31): ಪ್ರದಾನಿ ನರೇಂದ್ರ ಮೋದಿ ಅವರು ಹಳೆಯ 1000 ಹಾಗೂ 500 ರೂ.ಗಳನ್ನು ರದ್ದು ಪಡಿಸಿ ಇಂದಿಗೆ 50 ದಿನ ಕಳೆದಿವೆ. ಮುಂದಿನ ದಿನಗಳಿಂದ ಈ ಹಳೆಯ ನೋಟುಗಳು ಇತಿಹಾಸ ಪುಟ ಸೇರಿ ಆ ಜಾಗಕ್ಕೆ ಹೊಸ 500 ಹಾಗೂ 2000 ನೋಟುಗಳು ಬರಲಿವೆ.
ಪ್ರಧಾನಿಯವರು ನ .8ರಂದು ನೋಟು ನಿಷೇಧ ಕ್ರಮ ಘೊಷಿಸುವಾಗ ಭಾಷಣ ಮಾಡಿದ್ದರು.ಈಗ ಇಂದು ಸಂಜೆ ನಗದು ಕೊರತೆ ನಿವಾರಣೆ ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು ಮಹತ್ವದ ಘೊಷಣೆ ಜಾರಿಗೊಳಿಸುವ ಸಾಧ್ಯತೆಯಿದೆ. ನೋಟ್ ಬ್ಯಾನ್ ಆದ ನಂತರ ಬ್ಯಾಂಕುಗಳಲ್ಲಿ ಆಗಿರುವ ನೋಟುಗಳ ಸಂಗ್ರಹ, ದೇಶಾದ್ಯಂತ ನಡೆಸಿದ ದಾಳಿಗಳಲ್ಲಿ ಜಪ್ತಿ ಮಾಡಿರುವ ಹಣ ಹಾಗೂ ಆಸ್ತಿ ಮುಂತಾದ ಮಾಹಿತಿ ನೀಡುವ ಸಂಭವವಿದೆ.
ಅಲ್ಲದೆ ಮುಂದಿನ ಕಾರ್ಯ ಯೋಜನೆಗಳು, ನೋಟ್ ಬ್ಯಾನ್ ಆಗಿದ್ದಕ್ಕೆ ಸಮರ್ಥನೆ ಜೊತೆಗೆ ಕೇಂದ್ರದ ಈ ಕ್ರಮದಿಂದ ದೇಶಕ್ಕೆ ಆಗಿರುವ ಪ್ರಯೋಜನಗಳ ವಿವರಗಳು, ಕೃಷಿಕರು, ಕಾರ್ವಿುಕರಿಗೆ ಕೆಲ ಯೋಜನೆ, ರಿಯಾಯಿತಿ ಮುಂತಾದವನ್ನು ಘೋಷಿಸುವ ಸಾಧ್ಯತೆಯಿದೆ. ಅದಲ್ಲದೆ ನೋಟು ರದ್ದು ಬಳಿಕ ಹೇರಲಾಗಿರುವ ಕೆಲ ನಿರ್ಬಂಧಗಳನ್ನು ತೆರವುಗೊಳಿಸಬಹುದು.
ಆರ್ಬಿಐಗೆ ಸಿಕ್ತು ಹಳೆ ನೋಟಿನ ಪಕ್ಕಾ ಲೆಕ್ಕ!
ಚಲಾವಣೆ ರದ್ದಾಗಿರುವ ಹಳೆ ನೋಟುಗಳ ಪಕ್ಕಾ ಲೆಕ್ಕಾ ಈಗ ಭಾರತೀಯ ರಿಸವ್‌ರ್ ಬ್ಯಾಂಕ್‌ಗೆ ಸಿಕ್ಕಿದೆ.
ದೇಶವ್ಯಾಪಿ ಹರಡಿರುವ ಎಲ್ಲಾ ಬ್ಯಾಂಕುಗಳ ಶಾಖೆಗಳು ತಾವು ಸ್ವೀಕರಿಸಲ್ಪಟ್ಟಹಳೆಯ .500 ಮತ್ತು .1000 ನೋಟುಗಳ ಲೆಕ್ಕವನ್ನು ಶುಕ್ರವಾರ ಮಧ್ಯರಾತ್ರಿ ವೇಳೆಗೆ ತಲುಪಿಸಿವೆ. ಜಮಾ ಮಾಡಲು ಕೊನೆ ದಿನವಾದ ಶುಕ್ರವಾರವೇ ಪಕ್ಕಾ ಲೆಕ್ಕ ಸಲ್ಲಿಸುವಂತೆ ಆರ್‌ಬಿಐ ಎಲ್ಲಾ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಹಾಗೂ ಖಾಸಗಿ ಬ್ಯಾಂಕುಗಳ ಅಧ್ಯಕ್ಷರು, ಸಿಇಒಗಳು, ವ್ಯವಸ್ಥಾಪಕರು ಮತ್ತು ಆಯಾ ಶಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿತ್ತು. ಆ ಮೂಲಕ ಹಳೆ ನೋಟುಗಳ ಚಲಾವಣೆ ಸ್ವೀಕೃತಿಯನ್ನು ಅಂತ್ಯಗೊಳಿಸುವ ಅಧಿಸೂಚನೆ ಹೊರಡಿಸಿತು. ಅದರಂತೆ ಶುಕ್ರವಾರ ತಡ ರಾತ್ರಿವರೆಗೆ ಮಾಹಿತಿಯನ್ನು ಇ-ಮೇಲ್ ಮೂಲಕ ರವಾನಿಸಿವೆ. ಆಯಾ ದಿನದ ವಹಿವಾಟು ಅಂತ್ಯಗೊಂಡ ಕೂಡಲೇ ಮಾಹಿತಿ ರವಾನಿಸುವಂತೆ ಆರ್‌ಬಿಐ ಸೂಚಿಸಿತ್ತು. ಜತೆಗೆ ಬ್ಯಾಂಕುಗಳಲ್ಲಿ ಜಮೆಯಾಗಿರುವ ಹಳೆ ನೋಟುಗಳನ್ನು ಆಯಾ ಬ್ಯಾಂಕುಗಳ ಕರೆನ್ಸಿ ಚೆಸ್ಟ್‌ಗಳಿಗೆ ರವಾನಿಸಲಾಗಿದೆ.
ಕರೆನ್ಸಿ ಚೆಸ್ಟ್‌ಗಳಿಂದ ಸೂಚಿತ ಆರ್‌ಬಿಐ ಪ್ರಾದೇಶಿಕ ಕಚೇರಿಗಳಿಗೆ ಶನಿವಾರವೇ ತಲುಪಿಸುವಂತೆ ಸೂಚಿಸಿದೆ. ಆರ್‌ಬಿಐ ನೀಡಿರುವ ಮತ್ತೊಂದು ಪ್ರಮುಖ ಸೂಚನೆ ಎಂದರೆ ಡಿಸೆಂಬರ್ 31ರಂದು ವಹಿವಾಟು ಮುಕ್ತಾಯಗೊಂಡ ನಂತರ ಚಲಾವಣೆ ರದ್ದಾಗಿರುವ ಹಳೆಯ ನೋಟುಗಳು ಬ್ಯಾಂಕ್ ಲೆಕ್ಕದಿಂದ ಹೊರಗಿಡಬೇಕು. ಅಂದರೆ ಅವುಗಳನ್ನು ಬ್ಯಾಂಕ್ ಬ್ಯಾಲೆನ್ಸ್ ಜತೆಗೆ ಸೇರಿಸುವಂತಿಲ್ಲ.
ಆದರೆ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು(ಡಿಸಿಸಿಬಿ) ನವೆಂಬರ್ 10 ಮತ್ತು ನವೆಂಬರ್ 14ರ ನಡುವೆ ಸ್ವೀಕರಿಸಿರುವ ನೋಟುಗಳನ್ನು ರಸೀದಿ ಜತೆಗೆ ತಾವೇ ಇಟ್ಟುಕೊಳ್ಳುವಂತೆಯೂ ಆರ್‌ಬಿಐ ಸೂಚಿಸಿದೆ. ಮುಂದಿನ ಸೂಚನೆ ಬಂದ ನಂತರ ಅವುಗಳನ್ನು ಆರ್ಬಿಐಗೆ ತಲುಪಿಸಲು ಸೂಚಿಸಿದೆ. ಕರೆನ್ಸಿ ಚೆಸ್ಟ್‌ಗಳನ್ನು ನಿರ್ವಹಿಸುತ್ತಿ ರುವ ಬ್ಯಾಂಕುಗಳು, ವಿವಿಧ ಬ್ಯಾಂಕುಗಳು ಶಾಖೆಗಳು, ಅಂಚೆ ಕಚೇರಿಯಲ್ಲಿ ಜಮೆಯಾಗಿರುವ ಹಳೆ ನೋಟುಗಳನ್ನು ಸೂಕ್ತವಾಗಿ ಆರ್‌ಬಿಐಗೆ ತಲುಪಿಸುವಂತೆ ಸೂಚಿಸಿದೆ.
ಆರ್‌ಬಿಐಗೆ ತಲುಪಿಸುವವರೆಗೂ ಹಳೆಯ ನೋಟುಗಳನ್ನು ಸುರಕ್ಷಿತವಾಗಿಡುವಂತೆಯೂ ಕರೆನ್ಸಿ ಚೆಸ್ಟ್ ನಿರ್ವಹಿಸುತ್ತಿರುವ ಬ್ಯಾಂಕುಗಳಿಗೆ ಸೂಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.