
ನವದೆಹಲಿ: ಕಾಫಿ ನಾಡು ಕೊಡಗಿಗೆ ಈಗ ಮತ್ತೊಂದು ಗರಿ. ಕರ್ನಾಟಕದ ಈ ಮಲೆನಾಡು ಜಿಲ್ಲೆಯು ವಿಶ್ವದ ಅತಿ ದುಬಾರಿ ಕಾಫಿಯನ್ನು ಈಗ ಉತ್ಪಾದಿಸುತ್ತಿದೆ. ವಿಶೇಷವೆಂದರೆ ಪರಿಮಳ ಹೊರಸೂಸುವ ಪುನುಗು ಬೆಕ್ಕಿನ ಮಲದಿಂದ ಈ ಕಾಫಿ ಉತ್ಪಾದನೆ ಯಾಗುತ್ತಿದೆ!
ಲೂವರ್ಕ್ ಕಾಫಿ ಎಂದು ಕರೆಯಲ್ಪಡುವ ಇದನ್ನು ಅಸಾಂಪ್ರದಾಯಿಕ ರೀತಿಯಲ್ಲಿ ಉತ್ಪಾದಿಸಲಾಗುತ್ತದೆ. ಇದೇ ಇದು ದುಬಾರಿಯಾಗಲು ಕಾರಣ. ಕೊಲ್ಲಿ ದೇಶಗಳು ಹಾಗೂ ಯುರೋಪ್‌ನಲ್ಲಿ ಈ ವಿಶೇಷ ಕಾಫಿಗೆ ಬಲು ಬೇಡಿಕೆ ಇದೆ.
ಇದು ಸ್ಥಳೀಯವಾಗಿ ಕೇಜಿಗೆ ೮ ಸಾವಿರ ರು. ಹಾಗೂ ವಿದೇಶದಲ್ಲಿ ಪ್ರತಿ ಕೇಜಿಗೆ 20ರಿಂದ 25 ಸಾವಿರ ರು.ಗೆ ಮಾರಾಟವಾಗುತ್ತದೆ.
ಉತ್ಪಾದನೆ ಹೇಗೆ?: ಕಾಫಿ ತೋಟಗಳಲ್ಲಿ ಸಂಚರಿಸುವ ಪುನುಗು ಬೆಕ್ಕು, ಕಾಫಿ ಬೀಜವನ್ನು ಸೇವಿಸುತ್ತವೆ. ಬಳಿಕ ಆ ಬೆಕ್ಕು ಸುಗಂಧಭರಿತ ಮಲವಿಸರ್ಜನೆ ಮಾಡುತ್ತದೆ. ವಿಸರ್ಜನೆಯಾದ ಮಲದಲ್ಲಿನ ಕಾಫಿ ಬೀಜದ ಅಂಶಗಳನ್ನು ಸಂಗ್ರಹಿಸಿ, ಅದನ್ನು ಸಂಸ್ಕರಿಸಿ ಕಾಫಿಪುಡಿ ತಯಾರಿಸಲಾಗುತ್ತದೆ.
ಹೀಗೆ ತಯಾರಿಸಿದ ಕಾಫಿ ಬಲು ಪರಿಮಳಭರಿತವಾಗಿರುತ್ತದೆ. ಸಣ್ಣ ಪ್ರಮಾಣದ ಉತ್ಪಾದನೆ: ಈಗ ಆರಂಭಿಕ ಹಂತದಲ್ಲಿ ಸಣ್ಣ ಪ್ರಮಾಣದಲ್ಲಿ ಉತ್ಪಾದನೆ ಮಾಡಲು ಕೊಡಗಿನ ಕೂರ್ಗ್ ಕನ್ಸಾಲಿಡೇಟೆಡ್ ಕಮಾಡಿಟೀಸ್ (ಸಿಸಿಸಿ) ಎಂಬ ಸ್ಟಾರ್ಟಪ್ ಕಂಪನಿ ತೀರ್ಮಾನಿಸಿದೆ.
ಅಲ್ಲದೆ, ಸ್ಥಳೀಯವಾಗಿ ಈ ಕಾಫಿ ಲಭ್ಯವಿರುವ ಒಂದು ಕೆಫೆಯನ್ನು ತೆರೆಯಲೂ ತೀರ್ಮಾನಿಸಿದೆ. ಆರಂಭಿಕ ಹಂತದಲ್ಲಿ 20 ಕೇಜಿ ಪುನುಗು ಬೆಕ್ಕಿನ ಕಾಫಿಯನ್ನು ತಯಾರಿಸಲಾಗಿತ್ತು.
ಬಳಿಕ 2015-16ರಲ್ಲಿ 60 ಕೇಜಿ ಕಾಫಿ ತಯಾರಿಸಿದೆವು. ಕಳೆದ ವರ್ಷ ಇದರ ಪ್ರಮಾಣವನ್ನು 200 ಕೇಜಿಗೆ ಏರಿಸಿದೆವು. ಇದರ ಪ್ರಮಾಣವನ್ನು ಈ ಅಕ್ಟೋಬರ್‌ಗೆ ಅರ್ಧ ಟನ್‌ಗೆ ಹೆಚ್ಚಿಸಲು ನಿರ್ಧರಿಸಿದ್ದೇವೆ’ ಎಂದು ಸಿಸಿಸಿ ಸಂಸ್ಥಾಪಕರಲ್ಲಿ ಒಬ್ಬರಾದ ನರೇಂದ್ರ ಹೆಬ್ಬಾರ್ ತಿಳಿಸಿದ್ದಾರೆ.
ಈಗ ಕ್ಲಬ್ ಮಹೀಂದ್ರಾ ರೆಸಾರ್ಟ್‌ನಲ್ಲಿನ ಮಳಿಗೆಯಲ್ಲಿ ಈ ಕಾಫಿ ‘ಐನ್ಮನೆ’ ಹೆಸರಿನಲ್ಲಿ ಲಭ್ಯವಿದೆ. ಕಾಫಿ ತೋಟದ ಸನಿಹದಲ್ಲೇ ಇರುವ ಪುನುಗು ಬೆಕ್ಕುಗಳು ಕಾಫಿ ಬೀಜ ತಿನ್ನಲು ಬರುತ್ತವೆ. ಅಲ್ಲಿಂದಲೇ ಪುನುಗು ಬೆಕ್ಕಿನ ಮಲ ಸಂಗ್ರಹಿಸಲಾಗುತ್ತದೆ. ಪುನುಗು ಬೆಕ್ಕು ತಿಂದು ವಿಸರ್ಜಿಸಿದ ಕಾಫಿ ಬೀಜ ಬಲು ಪರಿಮಳ ಬೀರುತ್ತದೆ ಎಂದು ಹೇಳಿದ್ದಾರೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.