ಭತ್ತದ ಗದ್ದೆ ಭೂಮಿ ಪರಿವರ್ತನೆ ಜಾಮೀನು ರಹಿತ ಅಪರಾಧ!

By Suvarna Web DeskFirst Published Dec 24, 2017, 9:42 AM IST
Highlights
  • ಭತ್ತದ ಹೊಲಗಳ ಭೂಪರಿವರ್ತನೆ ಜಾಮೀನು ರಹಿತ ಅಪರಾಧ: ಕೇರಳ ಸರ್ಕಾರ ಚಿಂತನೆ
  • ತಿದ್ದುಪಡಿ ಮಸೂದೆಯ ಕರಡು ಸಿದ್ಧ

ತಿರುವನಂತಪುರಂ: ಭತ್ತದ ಹೊಲಗಳನ್ನು ಭೂಪರಿವರ್ತನೆಗೆ ಗುರಿಪಡಿಸುವುದನ್ನು ಜಾಮೀನು ರಹಿತ ಅಪರಾಧ ಎಂದು ಪರಿಗಣಿಸುವ ಕಾನೂನು ತರಲು ಕೇರಳ ಸರ್ಕಾರ ಚಿಂತಿಸಿದೆ. ಅಲ್ಲದೆ, ಬಳಕೆ ಮಾಡದ ಭತ್ತದ ಹೊಲಗಳನ್ನು ಮಾಲೀಕನ ಅನುಮತಿ ಪಡೆಯದೇ ಕೃಷಿ ಮಾಡುವ ಅನುಮತಿಯನ್ನು ಪಂಚಾಯತ್‌ಗಳಿಗೆ ನೀಡುವ ಬಗ್ಗೆಯೂ ಸರ್ಕಾರ ಚಿಂತಿಸಿದೆ.

ಈ ಸಂಬಂಧ ಕೇರಳ ಭತ್ತದ ಭೂಮಿಯ ಪರಿವರ್ತನೆ, ನೀರಾವರಿ ಭೂಮಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾಪ ಸರ್ಕಾರದ ಮುಂದಿದೆ. ತಿದ್ದುಪಡಿ ಮಸೂದೆಯ ಕರಡು ಸಿದ್ಧವಾಗಿದ್ದು, ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ.

click me!