‘ಒಬ್ಬ ತಂದೆಗೆ ಹುಟ್ಟಿದೋರು ಲಿಂಗಾಯತರು; 5 ಜನ ತಂದೆಗಳಿಗೆ ಹುಟ್ಟಿದೋರು ವೀರಶೈವರು'

By Suvarna Web DeskFirst Published Nov 5, 2017, 4:19 PM IST
Highlights

ಇಲ್ಲಿ ನಡೆದ  ಲಿಂಗಾಯತ ಸಮಾವೇಶದಲ್ಲಿ  ಪಂಚಮಸಾಲಿ ಪೀಠದ ಶ್ರೀಗಳು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಘನತೆವೆತ್ತ ಸ್ವಾಮಿಗಳು ತಮ್ಮ ಮಾತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಮಾತನಾಡಿದ್ದಾರೆ.

ಹುಬ್ಬಳ್ಳಿ (ನ.05): ಇಲ್ಲಿ ನಡೆದ  ಲಿಂಗಾಯತ ಸಮಾವೇಶದಲ್ಲಿ  ಪಂಚಮಸಾಲಿ ಪೀಠದ ಶ್ರೀಗಳು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಘನತೆವೆತ್ತ ಸ್ವಾಮಿಗಳು ತಮ್ಮ ಮಾತಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಮಾತನಾಡಿದ್ದಾರೆ.

ಒಂದು ತಂದೆಗೆ ಹುಟ್ಟಿದವರು ಲಿಂಗಾಯತರು. ಐದು ಜನ ತಂದೆಯವರಿಗೆ ಹುಟ್ಟಿದವರು ವೀರಶೈವರು.  ನೀವು ಒಂದು ತಂದೆಗೆ ಹುಟ್ಟಿದವರು ಎಂದು ಹೇಳಿಕೋಳ್ತೀರೋ ಅಥವಾ ಐದು ಜನ  ತಂದೆಗೆ ಹುಟ್ಟಿದವರು ಅಂತ ಹೇಳಿಕೊಳ್ತೀರಾ ಎಂದು ಶ್ರೀಗಳು ಪ್ರಶ್ನಿಸಿದ್ದಾರೆ.  ನಮ್ಮ‌ತಂದೆ ಒಬ್ಬನೇ ಎಂದು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಸಮಾವೇಶದಲ್ಲಿ ಹೇಳಿದ್ದಾರೆ.

Latest Videos

ಇನ್ನು ಈ ಸಮಾವೇಶದಲ್ಲಿ  ಸುಲಫಲ ಮಠದ ಸ್ವಾಮೀಜಿಗಳು ಕೂಡಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.  ವೀರಶೈವ ಪಂಚಪೀಠಾಧೀಶ ಹೇಗೆ ಹುಟ್ಟಿದ್ದಾರೆ? ಎಲ್ಲಿ ಹುಟ್ಟಿದ್ದಾರೆ? ನಮಗೆ ಗೊತ್ತಿದೆ.  ಸಮಾಜದಲ್ಲಿ ವಿಷ ಬಿತ್ತುವ ಕೆಲಸ ಪಂಚಾಚಾರ್ಯರೇ ಮಾಡುತ್ತಿದ್ದಾರೆ.  ಇಂತಹ ಸ್ವಾಮಿಗಳನ್ನ ಕಲ್ಲು ತಗೊಂಡು ಹೊಡಿರಿ ಎಂದು ಹೇಳಿದ್ದಾರೆ.

 

click me!