ವಿವಾದಿತ ದೇವಮಾನವ ಚಂದ್ರಸ್ವಾಮಿ ನಿಧನ

By Suvarna Web DeskFirst Published May 23, 2017, 8:06 PM IST
Highlights

ಪಾಶ್ವವಾಯುವಿನಿಂದ ನರಳುತ್ತಿದ್ದ ವಿವಾದಿತ ದೇವ ಮಾನವ ಚಂದ್ರಸ್ವಾಮಿ ಇಂದು ವಿಧಿವಶರಾಗಿದ್ದಾರೆ.

ನವದೆಹಲಿ (ಮೇ.23): ಪಾಶ್ವವಾಯುವಿನಿಂದ ನರಳುತ್ತಿದ್ದ ವಿವಾದಿತ ದೇವ ಮಾನವ ಚಂದ್ರಸ್ವಾಮಿ ಇಂದು ವಿಧಿವಶರಾಗಿದ್ದಾರೆ.

66 ವರ್ಷ ವಯಸ್ಸಾಗಿದ್ದ ಚಂದ್ರ ಸ್ವಾಮೀಜಿ ಕೆಲ ಸಮಯದಿಂದ ಅನಾರೋಗ್ಯದಿಂದ ನರಳುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚಿಗೆ ಪಾಶ್ವವಾಯು ಹೊಡೆದಿತ್ತು ಜೊತೆಗೆ ಬಹು ಅಂಗಾಂಗಗಳು ವೈಫಲ್ಯಗೊಂಡಿದ್ದವು. ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

ಚಂದ್ರಸ್ವಾಮಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಸರು ಮಾಡಿದ್ದರು. ಮಾಜಿ ಪ್ರದಾನಿ ದಿ.ನರಸಿಂಹ ರಾವ್’ಗೆ  ಅಧ್ಯಾತ್ಮಿಕ ಸಲಹೆಗಾರರಾಗಿದ್ದರು. ನರಸಿಂಹ ರಾವ್ ಪ್ರಧಾನಿಯಾದ ಬಳಿಕ  ಚಂದ್ರಸ್ವಾಮಿ ದೆಹಲಿಯಲ್ಲಿ ವಿಶ್ವಧರ್ಮಯಾತನ ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಇದಕ್ಕೆ ಭೂಮಿಯನ್ನು ಇಂದಿರಾ ಗಾಂಧಿಯವರು ನೀಡಿದ್ದರು ಎನ್ನಲಾಗಿದೆ.

ಜಾಗತಿಕ ಮಟ್ಟದಲ್ಲಿ ಸಾಕಷ್ಟು ರಾಜಕೀಯ ವ್ಯಕ್ತಿಗಳಿಗೆ, ದೊಡ್ಡ ದೊಡ್ಡ ವ್ಯಕ್ತಿಗಳಿಗೆ ಸಲಹೆ ನೀಡಿದ್ದಾರೆ. ಸಾಕಷ್ಟು ವಿವಾದಗಳು ಕೂಡಾ ಇವರ ಕೊರಳಿಗೆ ಸುತ್ತಿಕೊಂಡಿತ್ತು. ಲಂಡನ್ ನ ಬ್ಯುಸಿನೆಸ್ ಮ್ಯಾನ್ ಒಬ್ಬರಿಗೆ ಮೋಸ ಮಾಡಿದ ಆರೋಪದಲ್ಲಿ 1996 ರಲ್ಲಿ ಇವರನ್ನು ಬಂಧಿಸಲಾಗಿತ್ತು.

ಜಾರಿ ನಿರ್ದೇಶನಾಲಯ ಮತ್ತು ಫೆರಾ (FERA) ದಿಂದ ಆರೋಪವನ್ನು ಎದುರಿಸುತ್ತಿದ್ದರು. ರಾಜೀವ್ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಇವರ ವಿರುದ್ಧ ಇನ್ನೂ ತನಿಖೆ ನಡೆಸುತ್ತಿತ್ತು.

click me!