ವಿವಾದದಲ್ಲಿ ಭೂಸೇನಾ ಮುಖ್ಯಸ್ಥರ ನೇಮಕ; ಸೇವಾ ಹಿರಿತನ ಪರಿಗಣಿಸಲಾಗಿಲ್ಲ ಎಂಬ ಆರೋಪ

Published : Dec 18, 2016, 08:35 AM ISTUpdated : Apr 11, 2018, 01:01 PM IST
ವಿವಾದದಲ್ಲಿ ಭೂಸೇನಾ ಮುಖ್ಯಸ್ಥರ ನೇಮಕ; ಸೇವಾ ಹಿರಿತನ ಪರಿಗಣಿಸಲಾಗಿಲ್ಲ ಎಂಬ ಆರೋಪ

ಸಾರಾಂಶ

ನೇಮಕ ಪ್ರಕ್ರಿಯೆಯಲ್ಲಿ ಸರ್ಕಾರ ‘ಸೇವಾ ಹಿರಿತನ’ವನ್ನು ಪರಗಣಿಸಿಲ್ಲ. ಲೆ|ಜ| ಬಿಪಿನ್ ರಾವತ್’ಕ್ಕಿಂತಲೂ ಹೆಚ್ಚು ಅನುಭವ ಹೊಂದಿದ್ದ ಲೆ|ಜ| ಪ್ರವೀಣ್ ಬಕ್ಷಿ ಹಾಗೂ ಲೆ|ಜ| ಮುಹಮ್ಮದ್ ಅಲಿ ಅಂಥವರನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ನವದೆಹಲಿ (ಡಿ.18): ಭೂಸೇನೆ ಹಾಗೂ ವಾಯುಸೇನೆಗೆ ನೂತನ ಮುಖ್ಯಸ್ಥರನ್ನು ನೇಮಿಸಿರುವ ಕೇಂದ್ರ ಸರ್ಕಾರದ ಕ್ರಮವು ವಿವಾದವನ್ನು ಹುಟ್ಟುಹಾಕಿದೆ.

ಭೂಸೇನೆಗೆ ಮುಖ್ಯಸ್ಥರಾಗಿ ಲೆ|ಜ| ಬಿಪಿನ್ ರಾವತ್ ಅವರನ್ನು ನೇಮಿಸುವಾಗ  ಕೇಂದ್ರ ಸರ್ಕಾರ ನಿಯಮಗಳನ್ನು ಪಾಲಿಸಲ್ಲಾಗಿಲ್ಲವೆಂದು ಆರೋಪಿಸಲಾಗಿದೆ.

ನೇಮಕ ಪ್ರಕ್ರಿಯೆಯಲ್ಲಿ ಸರ್ಕಾರ ‘ಸೇವಾ ಹಿರಿತನ’ವನ್ನು ಪರಗಣಿಸಿಲ್ಲ. ಲೆ|ಜ| ಬಿಪಿನ್ ರಾವತ್’ಕ್ಕಿಂತಲೂ ಹೆಚ್ಚು ಅನುಭವ ಹೊಂದಿದ್ದ ಲೆ|ಜ| ಪ್ರವೀಣ್ ಬಕ್ಷಿ ಹಾಗೂ ಲೆ|ಜ| ಮುಹಮ್ಮದ್ ಅಲಿ ಅಂಥವರನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಲೆ|ಜ| ಬಿಪಿನ್ ರಾವತ್ ಅವರ ಅನುಭವ ಹಾಗೂ ಸಾಮರ್ಥ್ಯ ದ ಬಗ್ಗೆ ನಮಗೆ ಸಂಪೂರ್ಣ ಗೌರವವಿದೆ. ಆದರೆ, ಇತರರ ಸೇವಾ ಹಿರಿತನವನ್ನೇಕೆ ಕಡೆಗಣಿಸಲಾಗಿದೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ, ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ.

ಸೇನೆಯು ಸಾರ್ವಜನಿಕ ಸಂಸ್ಥೆಯಾಗಿರುವುದರಿಂದ ದೇಶದ ಜನರು ಸರ್ಕಾರದಿಂದ ಉತ್ತರ ಬಯಸುತ್ತಿದೆ ಎಂದು ಮನೀಶ್ ತಿವಾರಿ ಹೇಳಿದ್ದಾರೆ.

ಭೂಸೇನೆಯ ನೂತನ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಹಾಗೂ ವಾಯುಸೇನೆಯ ಏರ್ ಮಾರ್ಷಲ್ ಆಗಿ  ಬೀರೇಂಧರ್ ಸಿಂಗ್ ಧನೋವಾರನ್ನು ಕೇಂದ್ರ ಸರ್ಕಾರ ನಿನ್ನೆ ನೇಮಿಸಿದೆ.

ಡಿಸೆಂಬರ್ 31 ರಂದು ಹಾಲಿ ಭೂಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ನಿವೃತ್ತಲಾಗಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?
ಅತೀ ದೊಡ್ಡ ಪರಾರಿಗಳು ನಾವೇ, ಮಲ್ಯ ಜೊತೆಗೆ ವಿಡಿಯೋ ಮೂಲಕ ಭಾರತ ಅಣಕಿಸಿದ ಲಲಿತ್ ಮೋದಿ