ಮಕ್ಕಳ ಮನದಲ್ಲಿ ವರ್ಣಬೇಧ ಎಂಬ ವಿಷ: ವಿಡಿಯೋ..!

Published : Jun 08, 2018, 05:50 PM ISTUpdated : Jun 08, 2018, 06:04 PM IST
ಮಕ್ಕಳ ಮನದಲ್ಲಿ ವರ್ಣಬೇಧ ಎಂಬ ವಿಷ: ವಿಡಿಯೋ..!

ಸಾರಾಂಶ

ವರ್ಣಬೇಧ ನೀತಿ ಇನ್ನೂ ಹೋಗಿಲ್ಲ ಎಂಬುದಕ್ಕೆ ಸಾಕ್ಷಿ ಈ ವಿಡಿಯೋ ಪುಟ್ಟ ಮಕ್ಕಳನ್ನೂ ಭಾಧಿಸುತ್ತಿದೆ ಈ ಅನಿಷ್ಟ ಪದ್ದತಿ ಶ್ವೇತ ವರ್ಣದ ಮಕ್ಕಳೊಂದಿಗೆ ಆಟವಾಡಲು ನಿರಾಕರಣೆ ಪಾರ್ಕ್‌ನಲ್ಲಿ ತಾಯಿ-ಮಗು ದೂರ ಮಾಡಿದ ವರ್ಣಬೇಧ ಎಂಬ ವಿಷ

ಬಿಲ್ಬಾವೋ(ಜೂ.8): ವರ್ಣಬೇಧ ನೀತಿ ವಿರುದ್ದದ ಹೋರಾಟ ಇಂದು ನಿನ್ನೆಯದಲ್ಲ. ಮಹಾತ್ಮಾ ಗಾಂಧಿ ಅವರಿಂದ ಹಿಡಿದು ನೆಲ್ಸನ್ ಮಂಡೇಲಾವರೆಗೂ ಜಗತ್ತಿನ ಪ್ರಮುಖರೆಲ್ಲರೂ ಈ ಅನಿಷ್ಟ ಪದ್ದತಿಯ ವಿರುದ್ದ ತಮ್ಮ ಧ್ವನಿ ಎತ್ತಿದವರೇ. ಆದರೆ ಇಷ್ಟೆಲ್ಲಾ ಹೋರಾಟಗಳ ನಂತರವೂ ಜಗತ್ತಿನಿಂದ ವರ್ಣಭೇಧ ನೀತಿಯನ್ನು ಹೋಗಲಾಡಿಸಲು ಇನ್ನೂ ಸಾಧ್ಯವಾಗಿಲ್ಲ.

ಇನ್ನು ಈ ವರ್ಣಭೇಧ ನೀತಿ ಪುಟ್ಟ ಮಕ್ಕಳನ್ನೂ ಬಿಟ್ಟಿಲ್ಲ ಎಂಬುದು ಖೇದಕರ ಸಂಗತಿ. ಏನೂ ಅರಿಯದ ಪುಟ್ಟ ಕಂದಮ್ಮಗಳ ಮನಸ್ಸಲ್ಲಿ ವರ್ಣಭೇಧ, ಜನಾಂಗ ದ್ವೇಷವನ್ನು ಬಿತ್ತುತ್ತಿರುವ ಈ ವ್ಯವಸ್ಥೆಗೆ ಧಿಕ್ಕಾರ ಹೇಳಲೇಬೇಕಿದೆ. ಜಗತ್ತಿನ ಎಲ್ಲ ಭಾಗಗಳಲ್ಲಿ ಈ ವರ್ಣಬೇಧ ನೀತಿ ಹೇಗೆ ಇನ್ನೂ ಜೀವಂತವಾಗಿದೆ ಮತ್ತು ಅದು ಮಕ್ಕಳನ್ನೂ ಹೇಗೆ ಭಾಧಿಸುತ್ತಿದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. 

ಜತೆ ಜತೆಯಾಗಿ ಆಡುವ ಮಕ್ಕಳೇ, ಮಗು ಕಪ್ಪೆಂದು ದೂರ ಮಾಡಿದ ಘಟನೆ ಸ್ಪೇನ್ ನ ಬಿಲ್ಬಾವೋ ನಗರದಲ್ಲಿ ನಡೆದಿದೆ. ಶ್ವೇತ ವರ್ಣದ ಮಕ್ಕಳೊಂದಿಗೆ ಆಡಲು ತೆರಳಿದ ಮಗುವೊಂದನ್ನು ತಮ್ಮೊಟ್ಟಿಗೆ ಆಟಕ್ಕೆ ಸೇರಿಸಿಕೊಳ್ಳದ ಮಕ್ಕಳು ಅಮಾನವೀಯವಾಗಿ ವರ್ತಿಸಿವೆ.

ಕಪ್ಪು ವರ್ಣದ ಮಗುವಿನೊಂದಿಗೆ ಪಾರ್ಕ್‌ಗೆ ಬಂದ ತಾಯಿ, ತನ್ನ ಮಗುವಿಗೆ ಆಟವಾಡಿಸಲು ಸಾಕಷ್ಟು ಕಸರತ್ತು ಪಟ್ಟಿದ್ದಾಳೆ. ಯಾವುದೇ ಆಟಕ್ಕೆ ಕರೆದುಕೊಂಡು ಹೋದರೂ, ಅಲ್ಲಿರುವ ಶ್ವೇತ ವರ್ಣದ ಮಕ್ಕಳು ಇಬ್ಬರನ್ನೂ ದೂರ ತಳ್ಳುತ್ತಿರುವ ವಿಡಿಯೋ ಎಂತಹವರ ಕಣ್ಣಲ್ಲೂ ನೀರು ತರಿಸುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..
ಅಡಕೆ ಬೆಳೆಗಾರರ ನೆರವಿಗೆ ಕೇಂದ್ರ ತುರ್ತಾಗಿ ಮಧ್ಯಪ್ರವೇಶಿಸಲಿ: ಸಂಸದ ಬಿ.ವೈ.ರಾಘವೇಂದ್ರ