ಧರ್ಮ ನೋಡದೆ ಎಲ್ಲರಿಗೂ ಪ್ರಾರ್ಥನೆಗೆ ಅವಕಾಶ: ಪುರಿ ದೇಗುಲ ಮಂಡಳಿಗೆ ಸುಪ್ರೀಂ

First Published Jul 7, 2018, 12:07 PM IST
Highlights

ಪುರಿ ಜಗನ್ನಾಥ ಮಂದಿರದಲ್ಲಿ ನಡೆಯುವ ಅನೇಕ ಪವಾಡಗಳಿಗೆ ವಿಜ್ಞಾನವೂ ಉತ್ತರಿಸುವುದು ಅಸಾಧ್ಯ. ಇಂಥ ದೇವಾಲಯ ಕೆಲವೇ ಕೆಲವು ದಿನಗಳ ಕಾಲ ತೆರೆಯಲಿದೆ. ಈ ದೇವಸ್ಥಾನವನ್ನು ಪ್ರವೇಶಿಸಲು ಎಲ್ಲ ಧರ್ಮೀಯರಿಗೂ ಅವಕಾಶ ನೀಡಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.

ನವದೆಹಲಿ: ಯಾವುದೇ ಧರ್ಮ ನೋಡದೆ, ಎಲ್ಲರಿಗೂ ದೇವಸ್ಥಾನದಲ್ಲಿ ಪ್ರಾರ್ಥನೆಗೆ ಅವಕಾಶ ನೀಡಬೇಕು ಎಂದು ಸುಪ್ರೀಂಕೋರ್ಟ್‌ ಪುರಿ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿಗೆ ಆದೇಶಿಸಿದೆ.

‘ಹಿಂದುತ್ವ ಯಾವುದೇ ನಂಬಿಕೆಯನ್ನು ನಾಶಪಡಿಸಲು ಬಯಸುವುದಿಲ್ಲ. ಅದು ಶತಮಾನಗಳ ಪ್ರೇರಣೆಯಿಂದ ಪ್ರತಿಫಲಿತವಾದುದು’ ಎಂದು ಹೇಳಿರುವ ನ್ಯಾ.ಆದರ್ಶ ಗೋಯಲ್‌ ನೇತೃತ್ವದ ನ್ಯಾಯಪೀಠ, ಹಿಂದಿನ ಆದೇಶವನ್ನು ಉಲ್ಲೇಖಿಸಿ ಈ ತೀರ್ಪು ನೀಡಿದೆ. 

ಪುರಿ ಜಗನ್ನಾಥ ಮಂದಿರದ ಪವಾಡಗಳಿವು..

ದೇವಸ್ಥಾನದಲ್ಲಿ ಭಕ್ತರ ಮೇಲಿನ ದೌರ್ಜನ್ಯ ಮತ್ತು ಅನುವಂಶಿಕ ಅರ್ಚಕರ ರದ್ದತಿ ಹಾಗೂ ಅರ್ಚಕರ ನೇಮಕಾತಿ ಕುರಿತ ಸಮಸ್ಯೆಗಳ ಇತ್ಯರ್ಥಕ್ಕೆ ಎರಡು ವಾರಗಳೊಳಗೆ ಸಮಿತಿ ರಚಿಸುವಂತೆ ಕೇಂದ್ರಕ್ಕೆ ಕೋರ್ಟ್‌ ನಿರ್ದೇಶಿಸಿದೆ.

click me!