ಚುನಾವಣೆ ವಿಚಾರವಾಗಿ ಕಾಂಗ್ರೆಸ್’ಗೆ ಕಾಡುತ್ತಿದೆ ಚಿಂತೆ..!

By Suvarna Web DeskFirst Published Mar 2, 2018, 11:07 AM IST
Highlights

ಕಾಂಗ್ರೆಸ್ಸಿನ ರಹೀಂಖಾನ್ ಹಾಲಿ ಶಾಸಕ. ಅವರು ಮತ್ತೊಮ್ಮೆ ಸ್ಪರ್ಧಿಸುವುದು ಬಹುತೇಕ ಖಚಿತ. ಮಾಜಿ ಸಚಿವ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಬಿಜೆಪಿ ಅಭ್ಯರ್ಥಿ ಎಂಬ ಸೂಚನೆಯನ್ನು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈ ಹಿಂದೆಯೇ ನೀಡಿದ್ದಾರೆ.

ಬೀದರ್ : ಕಾಂಗ್ರೆಸ್ಸಿನ ರಹೀಂಖಾನ್ ಹಾಲಿ ಶಾಸಕ. ಅವರು ಮತ್ತೊಮ್ಮೆ ಸ್ಪರ್ಧಿಸುವುದು ಬಹುತೇಕ ಖಚಿತ. ಮಾಜಿ ಸಚಿವ ದಿವಂಗತ ಗುರುಪಾದಪ್ಪ ನಾಗಮಾರಪಳ್ಳಿ ಪುತ್ರ ಸೂರ್ಯಕಾಂತ ನಾಗಮಾರಪಳ್ಳಿ ಬಿಜೆಪಿ ಅಭ್ಯರ್ಥಿ ಎಂಬ ಸೂಚನೆಯನ್ನು ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಈ ಹಿಂದೆಯೇ ನೀಡಿದ್ದಾರೆ.

ಹೀಗಾಗಿ ಸೂರ್ಯಕಾಂತ ಬಿರುಸಿನ ಓಡಾಟದಲ್ಲಿ ತೊಡಗಿದ್ದಾರೆ. ಟಿಕೆಟ್ ಅಧಿಕೃತವಾಗಿ ಘೋಷಣೆಯಾಗಿಲ್ಲದ ಕಾರಣ, ಗುರುನಾಥ ಕೊಳ್ಳೂರ ಅಭ್ಯರ್ಥಿಯಾಗಲು ಪ್ರಯತ್ನಿಸುತ್ತಿದ್ದಾರೆ. ಆರ್‌ಎಸ್‌ಎಸ್ ಜತೆ ಒಡನಾಟ ಹೊಂದಿರುವ ಈಶ್ವರಸಿಂಗ್ ಠಾಕೂರ್ ತಮಗೇ ಟಿಕೆಟ್ ಸಿಗಲಿದೆ ಎನ್ನುತ್ತಿದ್ದಾರೆ.

ಜೆಡಿಎಸ್ ಜತೆಗಿನ ಮೈತ್ರಿ ಹಿನ್ನೆಲೆಯಲ್ಲಿ ಈ ಕ್ಷೇತ್ರದಿಂದ ಬಿಎಸ್ಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಜುಲ್ಫಿಕರ್ ಹಾಶ್ಮಿ ಕಣಕ್ಕಿಳಿಯಲಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಮರ ಪ್ರಾಬಲ್ಯವಿದೆ. ಲಿಂಗಾಯತ, ಪರಿಶಿಷ್ಟ ಜಾತಿ, ಪಂಗಡ, ಒಬಿಸಿ ಮತಗಳೂ ಹೆಚ್ಚಿನ ಪ್ರಮಾಣದಲ್ಲಿವೆ. ಬಿಎಸ್ಪಿ ಸ್ಪರ್ಧೆಯಿಂದಾಗಿ, ಅದರಲ್ಲೂ ಆ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿ ಸ್ಪರ್ಧಿಸುತ್ತಿರುವುದರಿಂದಾಗಿ ಕಾಂಗ್ರೆಸ್ಸಿಗೆ ಮತ ವಿಭಜನೆ ಆತಂಕವಿದೆ.

click me!