
ಬೆಂಗಳೂರು[ಜು. 23] ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್ ವಾಸವಿದ್ದರೂ ಎನ್ನಲಾದ ಅಪಾರ್ಟ್ ಮೆಂಟ್ ಮುಂದೆ ಘರ್ಷಣೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು ಸೆಕ್ಯೂರಿಟಿ ಗಾರ್ಡ್ ಗಳ ಜತೆ ವಾಗ್ಯುದ್ಧ ಮಾಡಿದ್ದು ಅಪಾರ್ಟ್ ಮೆಂಟ್ ಒಳಕ್ಕೆ ನುಗ್ಗಲು ಯತ್ನ ಮಾಡಿದ್ದಾರೆ.
ಕಳೆದ 15 ದಿನಗಳಿಂದ ರಾಜ್ಯದ ಎಲ್ಲ ಕಡೆ ವಿಶ್ವಾಸಮತದ ಚರ್ಚೆಯೇ ನಡೆಯುತ್ತಿದೆ. ವಿಧಾನಸೌಧದಲ್ಲಿ ಎಲ್ಲ ನಾಯಕರು ತಮ್ಮ ಅಭಿಪ್ರಾಯ ಮಂಡಿಸುತ್ತಲೇ ಇದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಸುದೀರ್ಘ ಭಾಷಣ ಮಾಡುತ್ತಿದ್ದಾರೆ.
ಇದೆಲ್ಲದರ ನಡುವೆ ಮುಂಬೈನಲ್ಲಿರುವ 15 ಜನ ಶಾಸಕರು ಸೇರಿ 20 ಜನರು ಸದನಕ್ಕೆ ಬಂದಿಲ್ಲ. ಅವರಲ್ಲಿ ಪಕ್ಷೇತರ ಶಾಸಕರಾದ ಮುಳುಬಾಗಿಲು ನಾಗೇಶ್ ಸಹ ಇದ್ದಾರೆ. ನಾಗೇಶ್ ಬಿಜೆಪಿ ನಾಯಕರ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತರು ರೇಸ್ ಕೋರ್ಸ್ ಸಮೀಪದ ಅಪಾರ್ಟ್ ಮೆಂಟ್ ಒಳಕ್ಕೆ ನುಗ್ಗಲು ಯತ್ನ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.