ಪ್ರಧಾನಿ ಕಚೇರಿಯಲ್ಲಿ ಮೋದಿ ಗೆಳೆಯ: ಮುದ್ದು ಮಾಡಲು ಮುಗಿಬಿದ್ದ ಇಂಡಿಯಾ!

Published : Jul 23, 2019, 04:34 PM ISTUpdated : Jul 24, 2019, 09:58 AM IST
ಪ್ರಧಾನಿ ಕಚೇರಿಯಲ್ಲಿ ಮೋದಿ ಗೆಳೆಯ: ಮುದ್ದು ಮಾಡಲು ಮುಗಿಬಿದ್ದ ಇಂಡಿಯಾ!

ಸಾರಾಂಶ

ಮೋದಿ ಭೇಟಿ ಮಾಡಲು ಸಂಸತ್ತಿನ ಮೋದಿ ಕಚೇರಿಗೆ ಬಂದ 'ಪುಟ್ಟ ಗೆಳೆಯ'| ಪುಟ್ಟ ಗೆಳೆಯನಿಗೆ ತಿಂಡಿ ತಿನ್ನಿಸಿ, ಆಡುವುದರಲ್ಲಿ ತಲ್ಲೀನರಾದ ಪ್ರಧಾನಿ| ಮಗುವಿನೊಂದಿಗಿರುವ ಮೋದಿ ಫೋಟೋಗೆ ಇಂಡಿಯಾ ಫುಲ್ ಫಿದಾ

ನವದೆಹಲಿ[ಜು.23]ಪ್ರಧಾನಿ ನರೇಂದ್ರ ಮೋದಿ ಸೋಶಿಯಲ್ ಮಿಡಿಯಾಗಳಲ್ಲಿ ಬಹಳಷ್ಟು ಆ್ಯಕ್ಟಿವ್ ಆಗಿರುತ್ತಾರೆ. ಮೋದಿಯನ್ನು ಟ್ವಿಟರ್, ಫೇಸ್ಬುಕ್ ಅಥವಾ ಇನ್ ಸ್ಟಾಗ್ರಾಂ ಅಕೌಂಟ್ ಫಾಲೋ ಮಾಡುತ್ತಿದ್ದರೆ , ಅವರ ದಿನಚರಿ, ಕೆಲಸ-ಕಾರ್ಯದ ಮಾಹಿತಿ ಸಿಗುತ್ತದೆ. ಸದ್ಯ ಪಿಎಂ ಮೋದಿ ತಮ್ಮ ಇನ್ಸ್ಟಾಗ್ರಾಂ ಪುಟ್ಟ ಮಗುವಿನೊಂದಿಗೆ ಕ್ಲಿಕ್ಕಿಸಿದ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. 

'ಪುಟ್ಟ ಗೆಳೆಯ'ನೊಂದಿಗೆ ಆಡುತ್ತಿರುವ ಫೋಟೋ ಶೇರ್ ಮಾಡಿಕೊಂಡಿರುವ ಮೋದಿ 'ಇಂದು ಸಂಸತ್ತಿನಲ್ಲಿ ಭೇಟಿಯಾಗಲು ಬಹಳ ವಿಶೇಷ ಗೆಳೆಯ ಆಗಮಿಸಿದ್ದ' ಎಂದು ಬರೆದಿದ್ದಾರೆ. ಎರಡು ಪೋಟೋಗಳನ್ನು ಶೇರ್ ಮಾಡಿಕೊಂಡಿದ್ದು, ಮೊದಲ ಫೋಟೋದಲ್ಲಿ ಪ್ರಧಾನಿ ಮಗುವಿಗೆ ತಿಂಡಿ ತಿನ್ನಿಸುತ್ತಿದ್ದರೆ, ಎರಡನೇ ಫೋಟೋದಲ್ಲಿ ಮಡಿಲಲ್ಲಿ ಕುಳ್ಳಿರಿಸಿ ಆಡಿಸುತ್ತಿರುವುದನ್ನು ನೋಡಬಹುದು. ಈ ವೇಳೆ ಮಗು ಪಿಎಂ ಮೋದಿ ಮೇಜಿನ ಮೇಲಿರುವ ಚಾಕೋಲೇಟ್ ಕಡೆ ನೋಡುತ್ತಿರುವುದನ್ನು ನೋಡಬಹುದಾಗಿದೆ.

ಈ ಮುದ್ದಾದ ಮಗು ಮಧ್ಯಪ್ರದೇಶ ಸಂಸದ ಸತ್ಯನಾರಾಯಣ ಜತಿಯಾರ ಮೊಮ್ಮಗ. ಜತಿಯಾ ಕುಟುಂಬಸ್ಥರು ಮೋದಿ ಭೇಟಿಗಾಗಿ ಸಂಸತ್ತಿಗೆ ಆಗಮಿಸಿದಾಗ ಮೋದಿ ಅವರು ಮಗುವನ್ನು ಎತ್ತಿಕೊಂಡು ಆಡಿಸಿದ್ದಾರೆ. 

ಹೀಗಿದ್ದರೂ ಜಮ್ಮು ಕಾಶ್ಮೀರದ ಮಾಜಿ ಸಿಎಂ ಓಮರ್ ಅಬ್ದುಲ್ಲಾ ಮಾತ್ರ ಈ ಫೋಟೋ ವಿಚಾರವಾಗಿ ಟ್ವೀಟ್ ಮಾಡಿ ಮೋದಿ ಕಾಲೆಳೆದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bannerghatta aquarium project: ಬನ್ನೇರುಘಟ್ಟದಲ್ಲಿ ₹144.4 ಕೋಟಿ ವೆಚ್ಚದ, ವಿಶ್ವದರ್ಜೆಯ ಅಕ್ವೇರಿಯಂಗೆ ಸಚಿವ ಸಂಪುಟದ ಮಹತ್ವದ ನಿರ್ಧಾರ
West Bengal fish pond conflict: ಚುನಾವಣಾ ಹಿಂಸಾಚಾರ ಆಯ್ತು, ಈಗ ಪಶ್ಚಿಮ ಬಂಗಾಳದಲ್ಲೀಗ ಮೀನುಗಾರಿಕೆ ಕೆರೆಗಳ ಹಿಡಿತಕ್ಕಾಗಿ ಸಂಘರ್ಷ