ಬಿಜೆಪಿಗೆ ಮುಖಭಂಗ : ಕೈ ತೆಕ್ಕೆಗೆ ಅಧಿಕಾರ

By Web DeskFirst Published May 11, 2019, 9:58 AM IST
Highlights

ಬಿಜೆಪಿ ಭಾರೀ ಮುಖಭಂಗವಾದರೆ ಇತ್ತ, ಕೈ ಅಧಿಕಾರ ಪಡೆದುಕೊಂಡಿದೆ. ಏನಿದು ವಿಚಾರ?

ಧಾರವಾಡ: ಬಿಜೆಪಿಗೆ ಶುಕ್ರವಾರ ನಡೆದ ಧಾರವಾಡ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತೀವ್ರ ಮುಖಭಂಗವಾಗಿದೆ. ಬಿಜೆಪಿ ಬೆಂಬಲಿತ ನಿರ್ದೇಶಕರೇ ಹೆಚ್ಚಿನ ಸಂಖ್ಯೆಯಲ್ಲಿ ದ್ದರೂ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅರಬಗೊಂಡ  ಆಯ್ಕೆಯಾಗಿದ್ದಾರೆ.

ಧಾರವಾಡ ಸೇರಿ ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಧಾರವಾಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಚುನಾವಣೆ ವೇಳೆ ಮಾಜಿ ಸಚಿವ ವಿನಯ ಕುಲಕರ್ಣಿ ಕೊನೇ ಕ್ಷಣದಲ್ಲಿ ಬಿಜೆಪಿ ಬೆಂಬಲಿತ ನಿರ್ದೇಶಕ ಹಾವೇರಿ ಯ ಬಸವರಾಜ ಅರಬಗೊಂಡರನ್ನು ತಮ್ಮತ್ತ ಸೆಳೆಯುವ ಮೂಲಕ ಒಕ್ಕೂಟವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡರು. ಬೆಳಗ್ಗೆಯಷ್ಟೇ ಕಾಂಗ್ರೆಸ್ ಸೇರ್ಪಡೆಯಾಗಿದ್ದ ಬಸವರಾಜ ಅರಬಗೊಂಡ 2 ಮತಗಳ ಅಂತರದಿಂದ ಜಯಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ನಿರ್ದೇಶಕ ಶಂಕರ ಮುಗದ ಹಾಗೂ ಕಾಂಗ್ರೆಸ್‌ನಿಂದ ಬಸವರಾಜ ಅರಬಗೊಂಡ ನಾಮಪತ್ರ ಸಲ್ಲಿದ್ದರು. ಒಕ್ಕೂಟದ 12 ನಿರ್ದೇಶಕರು ಸೇರಿ ಒಟ್ಟು 15 ಮತಗಳು ಚಲಾವಣೆಯಾಗಿದ್ದವು. ಈ ಪೈಕಿ ಶಂಕರ ಮುಗದ 6, ಬಸವರಾಜ ಅರಬಗೊಂಡ 8 ಮತಗಳನ್ನು ಪಡೆದಿದ್ದು, 1 ಮತ ತಿರಸ್ಕೃತವಾಗಿದೆ. ಶಂಕರ ಮುಗದ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ತಿಳಿಯುತ್ತಿದ್ದಂತೆ ಈಗಾಗಲೇ ಮೂರು ಬಾರಿಗೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಬಸವರಾಜ ಅರಬಗೊಂಡ ಸಹ ತೆರೆಮರೆಯಲ್ಲಿ ಕಸರತ್ತು ನಡೆಸಿದ್ದರು. ಆದರೆ, ಹೆಚ್ಚಿನ ನಿರ್ದೇಶಕರು ಮುಗದ ಪರವಾಗಿರುವುದು ತಿಳಿಯುತ್ತಿದ್ದಂತೆ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

click me!