ಸಿ-ಫೋರ್‌ ಸಮೀಕ್ಷೆಯಲ್ಲಿ ಮತ್ತೆ ಕಾಂಗ್ರೆಸ್‌ ಸರ್ಕಾರ

By Suvarna Web DeskFirst Published Mar 27, 2018, 9:00 AM IST
Highlights

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಮತ್ತೆ ಗೆಲುವು ಸಾಧಿಸಲಿದ್ದು, 2013ರಲ್ಲಿ ಪಡೆದ ಸ್ಥಾನಗಳಿಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಹಿಡಿಯಲಿದೆ ಎಂದು ‘ಸಿ-ಫೋರ್‌’ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷಾ ವರದಿ ತಿಳಿಸಿದೆ.

ಬೆಂಗಳೂರು :ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವು ಮತ್ತೆ ಗೆಲುವು ಸಾಧಿಸಲಿದ್ದು, 2013ರಲ್ಲಿ ಪಡೆದ ಸ್ಥಾನಗಳಿಗಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರ ಹಿಡಿಯಲಿದೆ ಎಂದು ‘ಸಿ-ಫೋರ್‌’ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷಾ ವರದಿ ತಿಳಿಸಿದೆ.

ವರದಿ ಬಿಡುಗಡೆಯಾದ ಬೆನ್ನಲ್ಲೇ ಇದು ಕಾಂಗ್ರೆಸ್‌ ಪೋಷಿತ ಸಮೀಕ್ಷಾ ವರದಿ ಎಂದು ವಿಪಕ್ಷಗಳು ಆರೋಪಿಸಿವೆ. ರಾಜ್ಯದಲ್ಲಿ ಇಷ್ಟೆಲ್ಲಾ ಅವ್ಯವಹಾರ, ಅನಾಚಾರಗಳು ನಡೆಯುತ್ತಿದ್ದರೂ 2013ಕ್ಕಿಂತಲೂ ಹೆಚ್ಚು ಸ್ಥಾನ ಗೆಲ್ಲುವುದಾಗಿ ಹೇಳಿರುವುದು ಹಾಸ್ಯಾಸ್ಪದ. ವರದಿಯ ಹಿಂದೆ ಕಾಂಗ್ರೆಸ್‌ ಪಕ್ಷ ಇದೆ ಎಂದು ಆರೋಪಿಸಿವೆ.

ಮಾ.1ರಿಂದ 25ರ ನಡುವೆ ನಡೆಸಿದ ಸಮೀಕ್ಷೆ ಪ್ರಕಾರ, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಶೇ.46, ಬಿಜೆಪಿ ಹಾಗೂ ಜೆಡಿಎಸ್‌ ಕ್ರಮವಾಗಿ ಶೇ.31 ಹಾಗೂ ಶೇ.16ರಷ್ಟುಮತ ಗಳಿಸಲಿದೆ. ಕಾಂಗ್ರೆಸ್‌ 126 ಸ್ಥಾನ ಗೆಲ್ಲಲಿದ್ದು, ಬಿಜೆಪಿ 70, ಜೆಡಿಎಸ್‌ 27 ಸ್ಥಾನಗಳನ್ನು ಪಡೆಯಲಿದೆ ಎಂದು ತಿಳಿಸಿದೆ.

ಸಿ-ಫೋರ್‌ ಸಂಸ್ಥೆಯು 154 ವಿಧಾನಸಭಾ ಕ್ಷೇತ್ರಗಳಲ್ಲಿನ 22,357 ಮತದಾರರನ್ನು ಸಂದರ್ಶಿಸಿ ಸಮೀಕ್ಷಾ ವರದಿ ತಯಾರಿಸಿದೆ. ಸಂದರ್ಶನಕ್ಕೆ ಒಳಪಡಿಸಿದ ಮತದಾರರು ರಾಜ್ಯದ 2,368 ಮತಗಟ್ಟೆಗಳಿಗೆ ಸೇರಿದವರಾಗಿದ್ದಾರೆ. 326 ಪಟ್ಟಣ ಅಥವಾ ನಗರ ಪ್ರದೇಶ ಹಾಗೂ 977 ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿತ್ತು ಎಂದು ಸಿ-ಫೋರ್‌ ಸಂಸ್ಥೆ ಸಮೀಕ್ಷಾ ವರದಿಯಲ್ಲಿ ತಿಳಿಸಿದೆ

ಸಮೀಕ್ಷೆ ಪ್ರಕಾರ ಪಕ್ಷಗಳ ಬಲಾಬಲ

ಒಟ್ಟು ಸ್ಥಾನಗಳು 224

ಪಕ್ಷ ಸ್ಥಾನಗಳು

ಕಾಂಗ್ರೆಸ್‌ 126

ಬಿಜೆಪಿ 70

ಜೆಡಿಎಸ್‌ 27

ಪಕ್ಷೇತರರು 1

click me!