ರಾಹುಲ್‌ ಉಳಿಸಿಕೊಳ್ಳಲು ಹೊಸ ಹುದ್ದೆ ಸೃಷ್ಟಿ?

By Web DeskFirst Published May 28, 2019, 10:50 AM IST
Highlights

ಕಾಂಗ್ರೆಸ್ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಲು ಮುಂದಾಗಿದ್ದು, ಇದೀಗ ರಾಹುಲ್ ಉಳಿಸಿಕೊಳ್ಳಲು ಹೊಸ ಹುದ್ದೆ ಸೃಷ್ಟಿಸಲಾಗುತ್ತಿದೆ. 

ನವದೆಹಲಿ: ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಪಟ್ಟು ಹಿಡಿದಿರುವ ರಾಹುಲ್‌ ಗಾಂಧಿ ಅವರನ್ನು ಮನವೊಲಿಸುವ ಸಲುವಾಗಿ ಪಕ್ಷದಲ್ಲಿ ಕಾರ್ಯಾಧ್ಯಕ್ಷ ಹುದ್ದೆಯೊಂದನ್ನು ಸೃಷ್ಟಿಸಬೇಕು ಎಂದು ಕೆಲ ಹಿರಿಯ ನಾಯಕರು ಪ್ರಸ್ತಾಪ ಇಟ್ಟಿದ್ದಾರೆ.

ನೆಹರು- ಗಾಂಧಿ ಕುಟುಂಬದ ಹೊರತಾದ ವ್ಯಕ್ತಿಗೆ ಕಾರ್ಯಾಧ್ಯಕ್ಷ ಹುದ್ದೆ ನೀಡಬೇಕು. ಕಾಂಗ್ರೆಸ್‌ ಅಧ್ಯಕ್ಷರಿಗೆ ಇವರು ಸಹಾಯ ಮಾಡಬೇಕು. ಅಧ್ಯಕ್ಷರ ದೈನಂದಿನ ಕೆಲಸಗಳನ್ನು ನೋಡಿಕೊಳ್ಳುವ ಮೂಲಕ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಪಕ್ಷ ಸಂಘಟಿಸಲು ಅಧ್ಯಕ್ಷರಿಗೆ ಅನುವು ಮಾಡಿಕೊಡಬೇಕು ಎಂಬುದು ಈ ಪ್ರಸ್ತಾವದ ತಿರುಳು ಎಂದು ವರದಿಗಳು ತಿಳಿಸಿವೆ. ಆದರೆ ಇದಕ್ಕೆ ರಾಹುಲ್‌ ಒಪ್ಪುತ್ತಾರಾ ಎಂಬುದು ತಿಳಿದುಬಂದಿಲ್ಲ.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕೆ ಹೀನಾಯ ಪ್ರದರ್ಶನ ನೀಡಿತು ಎಂಬ ಕಾರಣ ಪತ್ತೆಗೆ ಹಾಗೂ ಪ್ರಯೋಜನಾಕಾರಿ ಕ್ರಿಯಾಯೋಜನೆಗಳನ್ನು ರೂಪಿಸಲು ಸಮಿತಿಯೊಂದನ್ನು ರಚಿಸಬೇಕು. ಈ ಹಿಂದಿನ ರೀತಿ ವರದಿಯನ್ನು ರಹಸ್ಯವಾಗಿಡದೇ ಕಾಂಗ್ರೆಸ್ಸಿನ ಸಂಪೂರ್ಣ ಸಿಡಬ್ಲ್ಯುಸಿ (ಕಾಂಗ್ರೆಸ್‌ ಕಾರ್ಯಕಾರಿ) ಸಭೆಯ ಮುಂದೆ ಇಟ್ಟು ಚರ್ಚೆ ನಡೆಸಬೇಕು ಎಂದು ರಾಹುಲ್‌ ಅವರನ್ನು ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.

click me!