ಆಧಾರ್ ತೀರ್ಪು, ಬಿಜೆಪಿ ಕೆನ್ನೆಗೆ ಸ್ಲ್ಯಾಪು: ಕಾಂಗ್ರೆಸ್ ಪ್ರತಿಕ್ರಿಯೆ

By Web DeskFirst Published Sep 26, 2018, 6:10 PM IST
Highlights

ದೇಶದ ಜನರ ದೈನಂದಿನ ಜನಜೀವನದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಈ 12 ಅಂಕಿಯ ‘ಆಧಾರ್’ ತಂದಿದ್ದು, ಜನಸಾಮಾನ್ಯನ ನಾಗರಿಕ ಗುರುತು ಇದು. ದೇಶದಲ್ಲಿ ಅತಿ ಹೆಚ್ಚು ಚರ್ಚೆಯಾದ ವಿಷಯ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಾಧೀಶರ ಪೀಠ ಅಭಿಪ್ರಾಯಪಟ್ಟಿದೆ.

ನವದೆಹಲಿ[ಸೆ.26]: ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಪೀಠ  ಆಧಾರ್ ಸಂವಿಧಾನಿಕ ಮಾನ್ಯತೆ ಎಂದು ತೀರ್ಪು ನೀಡಿರುವುದರ ಬಗ್ಗೆ ವಿರೋಧ ಪಕ್ಷ ಕಾಂಗ್ರೆಸ್ ಸ್ವಾಗತಿಸಿದ್ದು, ಇದು ಬಿಜೆಪಿ ಕೆನ್ನೆಗೆ ನೀಡಿದ ನಿಜವಾದ ಹೊಡೆತ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.

ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಆಧಾರ್ ಕಾಯ್ದೆಯ ಸೆಕ್ಷನ್ 57 ರನ್ನು ರದ್ದುಗೊಳಿಸಲಾಗಿದ್ದು, ಇದು ಬಿಜೆಪಿಗೆ ನಿಜವಾದ ಹೊಡೆತ ಎಂದಿದ್ದು, ಆಧಾರ್ ಮಾಹಿತಿಯನ್ನು ಪರಿಶೀಲಿಸಲು ಖಾಸಗಿ ಸಂಸ್ಥೆಗಳು ಅನುವು ಮಾಡಿಕೊಡುತ್ತಿತ್ತು. ಈ ಹಿನ್ನೆಲೆಯಲ್ಲಿ ಕೋರ್ಟ್ ತೀರ್ಪು ಬಿಜೆಪಿಗೆ ಸಿಕ್ಕ ತಪರಾಕಿ ಎಂದು ವಿಶ್ಲೇಷಿಸಿದೆ.

ಹೆಚ್ಚು ಚರ್ಚೆಯಾದ ವಿಷಯ
ದೇಶದ ಜನರ ದೈನಂದಿನ ಜನಜೀವನದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಈ 12 ಅಂಕಿಯ ‘ಆಧಾರ್’ ತಂದಿದ್ದು, ಜನಸಾಮಾನ್ಯನ ನಾಗರಿಕ ಗುರುತು ಇದು. ದೇಶದಲ್ಲಿ ಅತಿ ಹೆಚ್ಚು ಚರ್ಚೆಯಾದ ವಿಷಯ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪಂಚ ನ್ಯಾಯಾಧೀಶರ ಪೀಠ ಅಭಿಪ್ರಾಯಪಟ್ಟಿದೆ.

ಈಗಾಗಲೇ ಈ ವಿಶಿಷ್ಟ ಗುರುತನ್ನು ಬಹುತೇಕ ಭಾರತೀಯರಿಗೆ ನೀಡಿಯಾಗಿದೆ. ಆಧಾರ್ ಪ್ರತಿಯೊಬ್ಬ ಭಾರತೀಯನ ಗೌರವದ ಸಂಕೇತ ಎಂದು ಪೀಠ ಹೇಳಿದೆ. ಆಧಾರ್ ಅತ್ಯಂತ ವಿಶಿಷ್ಟವಾಗಿದ್ದು, ಇದನ್ನು ನಕಲು ಮಾಡಲು ಸಾಧ್ಯವಿಲ್ಲ ಎಂದೂ ಪೀಠ ಹೇಳಿದೆ.

ಈ ಸುದ್ದಿಯನ್ನು ಓದಿ: ಆಧಾರ್ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ: ಕೆಲವು ಷರತ್ತು ಅನ್ವಯ!

ಆಧಾರ್ ಮೇಲೆ ಕೇಂದ್ರ ಸರ್ಕಾರದ ಕಣ್ಗಾವಲು ಇದೆ ಎಂಬ ವಾದವನ್ನು ಒಪ್ಪದ ಸುಪ್ರೀಂ, ಆಧಾರ್ ಪ್ರಾಧಿಕಾರದಿಂದ ಗೌಪ್ಯತೆಯ ಭರವಸೆ ನೀಡಿದ ಮೇಲೆ ಈ ಕುರಿತು ವಿಚಾರ ಮಾಡುವ ಅಗತ್ಯ ಏನಿದೆ ಎಂದು ಪ್ರಶ್ನಿಸಿದೆ. ಇದೇ ವೇಳೆ ಆಧಾರ್ ಕಾಯ್ದೆಯ ಕಲಂ 33/2 ನ್ನು ರದ್ದುಗೊಳಿಸಿರುವ ಸುಪ್ರೀಂ, ಆಧಾರ್ ಕೇವಲ ಸರ್ಕಾರಿ ಕೆಲಸಗಳಿಗೆ ಮಾತ್ರ ಬಳಸಬೇಕೆ ಹೊರತು ಖಾಸಗಿ ಸಂಸ್ಥೆಗಳು ಹಣಕಾಸು ಉದ್ದೇಶಕ್ಕಾಗಿ ಆಧಾರ್ ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಇದು ಮೊಬೈಲ್ ಕಂಪನಿಗಳಿಗೂ ಅನ್ವಯವಾಗಲಿದೆ ಎಂದು ಸುಪ್ರೀಂ ತಿಳಿಸಿದೆ.

ಈ ಸುದ್ದಿಯನ್ನು ಓದಿ: ಆಧಾರ್ ಮಾನ್ಯತೆ: ಸುಪ್ರೀಂ ತೀರ್ಪಿಗೆ ರಾಜೀವ್ ಚಂದ್ರಶೇಖರ್ ಪ್ರತಿಕ್ರಿಯೆ
 

click me!