
ಜಿಮ್ ತರಬೇತುದಾರನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಟ ದುನಿಯಾ ವಿಜಯ್ ಹಾಗೂ ಆತನ ಮೂವರು ಸಹಚರರಿಗೆ ಜಾಮೀನು ಅರ್ಜಿ ವಜಾಗೊಳಿಸಿದ್ದು, ಅರ್ಜಿ ತಿರಸ್ಕಾರಕ್ಕೆ ಕಾರಣವಾದ ಪ್ರಮುಖ ಅಂಶಗಳಿವು.
1] ಹಲ್ಲೆಗೊಳಗಾದ ಮಾರುತಿಗೌಡ ಇನ್ನು ಆಸ್ಪತ್ರೆಯಲ್ಲಿ ಇದ್ದಾರೆ
2] ಮಾರುತಿಗೌಡ ಕಣ್ಣು ಹಾಗೂ ಮುಖದ ಭಾಗಕ್ಕೆ ತೀವ್ರ ಪೆಟ್ಟಾಗಿದೆ ಎಂದು ವೈದ್ಯರು ವರದಿ ನೀಡಿದ್ಧಾರೆ
3] ದುನಿಯಾ ವಿಜಿ ಪ್ರಭಾವಿ ಆಗಿರುವುದರಿಂದ ಹೊರಗೆ ಬಂದರೆ ಸಾಕ್ಷಿನಾಶವಾಗುವ ಸಾಧ್ಯತೆ
4] ಗಾಂಜಾ ಸೇವಿಸಿ ಹಲ್ಲೆ ಮಾಡಿರಬಹುದೆಂದು ವಿಜಿ ರಕ್ತ ಹಾಗೂ ಮೂತ್ರ ಪರೀಕ್ಷೆಯನ್ನು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಮಾಡಲಾಗಿದ್ದು, ಆದರೆ
ಎಫ್ ಎಸ್ ಎಲ್ ವರದಿ ಇನ್ನೂ ಕೊರ್ಟ್ ಗೆ ಸಲ್ಲಿಕೆಯಾಗಿಲ್ಲ
5] ಮಾರುತಿಗೌಡನ ತಲೆಗೆ ತೀವ್ರ ಪೆಟ್ಟಾಗಿತ್ತು ಆತನ ತಲೆಗೆ ಸ್ಕ್ಯಾನಿಂಗ್ ಕೂಡ ಮಾಡಲಾಗಿದ್ದು, ವೈದ್ಯರು ನೀಡಿದ ಆರೋಗ್ಯ ವರದಿ ಜಾಮೀನು ಅರ್ಜಿ ವಜಾ
ಆಗಲು ಪ್ರಮುಖ ಕಾರಣ
ಈ ಸುದ್ದಿಯನ್ನು ಓದಿ: ದುನಿಯಾ ವಿಜಿ ಜಾಮೀನು ಅರ್ಜಿ ವಜಾ: ಮತ್ತೇ ಜೈಲೆ ಗತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.