ಕಾಂಗ್ರೆಸ್ ಟಿಕೆಟ್ ಬೇಕೆಂದ್ರೆ ಇದೆಲ್ಲಾ ಕಡ್ಡಾಯ.! ಖಡಕ್ ಸೂಚನೆ

By Web DeskFirst Published Sep 3, 2018, 1:44 PM IST
Highlights

ಚುನಾವಣೆ ಸಮೀಪಿಸುತ್ತಿರುವಾಗಲೇ ಕಾಂಗ್ರೆಸ್ ಖಡಕ್ ಸೂಚನೆಯನ್ನು ಹೊರಡಿಸಿದೆ. ಕಾಂಗ್ರೆಸ್ ನಲ್ಲಿ ಟಿಕೆಟ್ ಬೇಕು ಎಂದರೆ ಅತ್ಯಧಿಕ ಸಂಖ್ಯೆಯಲ್ಲಿ ಸಾಮಾಜಿಕ ಜಾಲತಾಣದ ಫಾಲೋವರ್ಸ್ ಗಳನ್ನು ಹೊಂದಿರಬೇಕು ಎಂದು ಹೇಳಿದೆ. 

ಭೋಪಾಲ್ :  ಮಧ್ಯ ಪ್ರದೇಶದಲ್ಲಿ ಇನ್ನೇನು ಚುನಾವಣೆ ಸಮೀಪಿಸುತ್ತಿದ್ದು ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಹೊಸ ಸೂಚನೆಯೊಂದನ್ನು ಹೊರಡಿಸಿದೆ. 

ಕಾಂಗ್ರೆಸ್ ನಿಂದ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ಬೇಕು ಎಂದರೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಳ್ಳಿ ಎಂದು ಹೇಳಿದೆ. ಅಲ್ಲದೇ ಪ್ರತೀ ನಾಯಕರೂ ಕೂಡ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಅಕೌಂಟ್ ಹೊಂದಿರುವುದು ಕಡ್ಡಾಯ ಎಂದು ಹೇಳಿದೆ. 

ಕೇವಲ ಸಾಮಾಜಿಕ ಜಾಲತಾಣದಲ್ಲಿ  ಅಕೌಂಟ್ ಗಳನ್ನು ಹೊಂದಿರುವು ಅಷ್ಟೇ ಕಡ್ಡಾಯವಲ್ಲ ಅದರೊಂದಿಗೆ ಅತ್ಯಧಿಕ ಸಂಖ್ಯೆಯಲ್ಲಿ ಪಾಲೋವರ್ಸ್ ಗಳನ್ನು ಹೊಂದುವುದು ಕಡ್ಡಾಯ ಎಂದು ಹೇಳಿದ್ದಾರೆ. 

ಕನಿಷ್ಟ ಫೇಸ್ ಬುಕ್ ನಲ್ಲಿ 15 ಸಾವಿರ ಲೈಕ್ ಗಳನ್ನು ಪಡೆಯಬೇಕು.  ಟ್ವಿಟ್ಟರ್ ನಲ್ಲಿ 5 ಸಾವಿರ ಫಾಲೋವರ್ಸ್ ಗಳನ್ನು ಹೊಂದಿರಬೇಕು. ವಿವಿಧ ವಾಟ್ಸಾಪ್ ಗ್ರೂಪ್ ಗಳಲ್ಲಿ ಇರಬೇಕು ಎಂದು ಸೂಚನೆ ನೀಡಲಾಗಿದೆ. ಅಲ್ಲದೇ ಪ್ರತೀ ಮುಖಂಡರೂ ಕೂಡ ತಮ್ಮ ಸಾಮಾಜಿಕ ಜಾಲತಾಣದ ಬಗ್ಗೆ ಮಾಹಿತಿಯನ್ನು ನೀಡಬೇಕು. ಸೆಪ್ಟೆಂಬರ್ 15ರ ಒಳಗೆ ಮಾಹಿತಿ ಸಲ್ಲಿಸಲು ಸೂಚನೆ ನೀಡಲಾಗಿದೆ. 

click me!