10 ಅಡಿ ಎತ್ತರದಲ್ಲಿ ಸಿಎಂ ಕುರ್ಚಿ ಇರಿಸಿದ ಸರ್ಕಾರ?

By Web DeskFirst Published Sep 3, 2018, 1:26 PM IST
Highlights

ಸಿಎಂ ಕುಮಾರಸ್ವಾಮಿ ಅವರು ಕೂರುವ ಕುರ್ಚಿಯ ಎತ್ತರವನ್ನು 10 ಅಡಿ ಎತ್ತರಕ್ಕೆ ಏರಿಸಲಾಗಿದೆ. ಅದು ಬಿಎಸ್ ವೈ ಅವರಿಗೆ ಎಟುಕದಿರಲು ಈ ಕ್ರಮ ಕೈಗೊಳ್ಳಲಾಗಿದೆ. 

ಸುಳ್‌ಸುದ್ದಿ ವಾರ್ತೆ ಬೆಂಗಳೂರು : ಮತ್ತೆ ಮುಖ್ಯಮಂತ್ರಿ ಆಗುವುದಕ್ಕೆ ಬಿಎಸ್‌ವೈ ಯತ್ನಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಎಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರ ಸಿಎಂ ಕುರ್ಚಿಯ ಎತ್ತರವನ್ನು 10 ಅಡಿ ಎತ್ತರಕ್ಕೆ ಏರಿಸಿದೆ. ಕೈಗೆ ನಿಲುಕುವಷ್ಟು ಸನಿಹದಲ್ಲಿ ಇದ್ದರೆ ಸಿದ್ದರಾಮಯ್ಯ ಅಥವಾ ಬಿ.ಎಸ್. ಯಡಿಯೂರಪ್ಪ ಅದರಲ್ಲಿ ಕೂತುಬಿಡುವ ಅಪಾಯವಿದೆ. 

ಅಲ್ಲದೇ ಸಿಎಂ ಕರ್ಚಿಯ ಎತ್ತರವನ್ನು ಏರಿಸುವುದು ವಾಸ್ತುಪ್ರಕಾರವೂ ಒಳ್ಳೆಯದು. ಕುಮಾರಸ್ವಾಮಿ ಕೂರಲು ಇನ್ನೊಂದು ಪ್ಲಾಸ್ಲಿಕ್ ಕುರ್ಚಿ ಇರಿಸಿದರೆ ಸಾಕು. ಮುಖ್ಯಮಂತ್ರಿ ಕುರ್ಚಿ ಮೇಲೆ ಇನ್ನು 5 ವರ್ಷ ಯಾರೂ ಕೂರುವುದು ಬೇಡ ಎಂದು ರೇವಣ್ಣ ಸಲಹೆ ನೀಡಿದ್ದಾರೆ. 

ಸಿದ್ದು ಅನುಪಸ್ಥಿತಿಯಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.

click me!