ರಮ್ಯಾ ಜತೆ ಕೆಲಸ ಮಾಡ್ತೀರಾ? ಹಾಗಾದರೆ ಅರ್ಜಿ ಹಾಕಿ,25 ಹುದ್ದೆಗಳಿಗೆ ಅರ್ಜಿ ಆಹ್ವಾನ

By SUvarna Web DeskFirst Published Jul 12, 2017, 1:00 AM IST
Highlights

ಈ ನಡುವೆ, ಪಕ್ಷದ ಆಯಕಟ್ಟಿನ ಸ್ಥಳಗಳಲ್ಲಿ ಬದಲಾವಣೆ ಆಗುತ್ತಿರುವ ಬಗ್ಗೆ ರಮ್ಯಾ ಅವರನ್ನು ಪ್ರಶ್ನಿಸಿದಾಗ, ‘ಪಕ್ಷದ ಐತಿಹಾಸಿಕ ಬೆಳವಣಿಗೆಗೆ ಇದು ಅಗತ್ಯ. ಇದಕ್ಕೆ ನಾವು ಉತ್ತೇಜನ ನೀಡುತ್ತೇವೆ. ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ವಲಸೆ ಸಾಮಾನ್ಯ’ ಎಂದಿದ್ದಾರೆ.

ನವದೆಹಲಿ(ಜು.12): ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಘಟಕಕ್ಕೆ ಕನ್ನಡದ ನಟಿ, ಮಾಜಿ ಸಂಸದೆ ರಮ್ಯಾ ಅಧ್ಯಕ್ಷೆಯಾಗುತ್ತಿದ್ದಂತೆಯೇ ಮೋದಿ ಸರ್ಕಾರದ ವಿರುದ್ಧ ‘ಡಿಜಿಟಲ್ ಯುದ್ಧ’ ಸಾರಲು ನಿರ್ಧರಿಸಿದ್ದಾರೆ. ಅದಕ್ಕೆಂದೇ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಘಟಕವು 25 ಹುದ್ದೆಗಳಿಗೆ ಮಂಗಳವಾರ ಅರ್ಜಿ ಆಹ್ವಾನಿಸಿದೆ.

ತನ್ನ ಉದ್ಯೋಗಾವಕಾಶ ಸಂಬಂಧೀ ‘ಲಿಂಕ್ಡ್ ಇನ್’ ಆನ್‌ಲೈನ್ ತಾಣದಲ್ಲಿ ವಿವಿಧ ಹುದ್ದೆಗಳಿಗೆ ಕಾಂಗ್ರೆಸ್ ಅರ್ಜಿ ಕರೆದಿದೆ. ವಿಶ್ಲೇಷಣಾ ವ್ಯವಸ್ಥಾಪಕ, ಡಿಜಿಟಲ್ ಮೀಡಿಯಾ ಪ್ಲ್ಯಾನರ್, ಡಾಟಾ ಅನಲಿಸ್ಟ್, ಎನಿಮೇಟರ್, ವಿಡಿಯೋ ಎಡಿಟರ್, ಕ್ಯಾರಿಕೇಚರ್ ಚಿತ್ರಕಾರ, ಅಕೌಂಟ್ ಡೈರೆಕ್ಟರ್ ಸೇರಿದಂತೆ 25ಹುದ್ದೆಗಳ ನೇಮಕಗಳು ಇದರಲ್ಲಿ ಸೇರಿವೆ.

ಇದೇ ವೇಳೆ ಕನ್ನಡ, ತಮಿಳು, ಕನ್ನಡ ಹಾಗೂ ಗುಜರಾತಿ ಲೇಖನಗಳು ಹಾಗೂ ಭಾಷಣಗಳನ್ನು ತರ್ಜುಮೆ ಮಾಡುವವರಿಗೂ ಅರ್ಜಿ ಆಹ್ವಾನಿಸಲಾಗಿದೆ.

‘ಹೌದು. ನಮ್ಮ ತಂಡವನ್ನು ವಿಸ್ತರಿಸುತ್ತಿದ್ದೇವೆ’ ಎಂದು ರಮ್ಯಾ ಸುದ್ದಿವಾಹಿನಿಯೊಂದಕ್ಕೆ ಖಚಿತಪಡಿಸಿದ್ದಾರೆ.

click me!