ಅಮಿತ್ ಶಾ ‘ಕಸಬ್’ ಹೇಳಿಕೆ ಹತಾಶೆಯ ಲಕ್ಷಣ: ಕಾಂಗ್ರೆಸ್

Published : Feb 23, 2017, 06:10 AM ISTUpdated : Apr 11, 2018, 12:44 PM IST
ಅಮಿತ್ ಶಾ ‘ಕಸಬ್’ ಹೇಳಿಕೆ ಹತಾಶೆಯ ಲಕ್ಷಣ: ಕಾಂಗ್ರೆಸ್

ಸಾರಾಂಶ

ಭಾಷಣದಲ್ಲಿ ಕೆಟ್ಟ ಪದಗಳನ್ನು ಬಳಕೆ ಹಾಗೂ ಹುಸಿ ಹೇಳಿಕೆಗಳನ್ನು ನೀಡುವುದು ಬಿಜೆಪಿ ರಾಷ್ಟ್ರಾಧ್ಯಕ್ ಅಮಿತ್ ಶಾ ಅವರ ಹಳೆಯ ಚಾಳಿ ಎಂದು ಸುರ್ಜೆವಾಲ ಹೇಳಿದ್ದಾರೆ.

ನವದೆಹಲಿ (ಫೆ.23):  ಬಿಜೆಪಿ ರಾಷ್ಟ್ರಾದ್ಯಕ್ಷ ಅಮಿತ್ ಶಾ ಅವರ ‘ಕಸಬ್’’ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷ, ಆ ರೀತಿಯ ಅವಹೇಳನಕಾರಿ ಹೇಳಿಕೆಗಳು ಹತಾಶೆಯ ಲಕ್ಷಣವೆಂದು ತಿರಗೇಟು ನೀಡಿದೆ.

ಅಂತಹ ಅವಹೇಳನಕಾರಿ ಹಾಗೂ ಕೀಳು ಮಟ್ಟದ ಹೇಳಿಕೆಗಳನ್ನು ನೀಡಲು ಹತಾಶ ನಾಯಕರಿಂದ ಮಾತ್ರ ಸಾಧ್ಯ, ಎಂದು ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.

ಭಾಷಣದಲ್ಲಿ ಕೆಟ್ಟ ಪದಗಳನ್ನು ಬಳಕೆ ಹಾಗೂ ಹುಸಿ ಹೇಳಿಕೆಗಳನ್ನು ನೀಡುವುದು ಬಿಜೆಪಿ ರಾಷ್ಟ್ರಾಧ್ಯಕ್ ಅಮಿತ್ ಶಾ ಅವರ ಹಳೆಯ ಚಾಳಿ ಎಂದು ಸುರ್ಜೆವಾಲ ಹೇಳಿದ್ದಾರೆ.

ಅಮಿತ್ ಶಾ ಹೇಳಿಕೆಯು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆಯಲ್ಲದೇ, ಕೇಸರಿ ಪಕ್ಷದ ಕೋಮು ಮನಸ್ಥಿತಿಯನ್ನು ಎತ್ತಿ ತೋರಿಸುತ್ತಿದೆಯೆಂದು, ಕಾಂಗ್ರೆಸ್ ಇನ್ನೋರ್ವ ನಾಯಕ ಅಭಿಶೇಕ್ ಮನು ಸಿಂಘ್ವಿ ಹೇಳಿದ್ದಾರೆ.

ನಿನ್ನೆ ಚುನಾವಣಾ ರ್ಯಾಲಿಯನ್ನುದ್ದೆಶಿಸಿ ಮಾತನಾಡಿದ ಅಮಿತ್ ಶಾ, ಕಾಂಗ್ರೆಸ್, ಬಿಎಸ್ಪಿ, ಎಸ್ಪಿ ಪಕ್ಷಗಳನ್ನು ‘ಕಸಬ್’ಗೆ ಹೋಲಿಸಿದ್ದರು.

ಕಳೆದ 15 ವರ್ಷಗಳಲ್ಲಿ ಉತ್ತರ ಪ್ರದೇಶವನ್ನು ಎಸ್ಪಿ ಹಾಗೂ ಬಿಸ್ಪಿ ಪಕ್ಷಗಳು ನಾಶಪಡಿಸಿವೆ. ಉತ್ತರ ಪ್ರದೇಶದ ಜನತೆ ‘ಕಸಬ್’ ಅನ್ನು ತೊಡೆದು ಹಾಕಬೇಕು. ಕ- ಕಾಂಗ್ರೆಸ್, ಸ- ಸಮಾಜವಾದಿ, ಬ-ಬಹುಜನ ಸಮಾಜವಾದಿ ಪಕ್ಷ ಎಂದು  ಶಾ ವ್ಯಂಗ್ಯವಾಡಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತೆಲಂಗಾಣ ಸಾರಿಗೆ ಅಧಿಕಾರಿ ₹100 ಕೋಟಿ ಆಸ್ತಿ ಒಡೆಯ?
ದೇಶದಲ್ಲಿ ಮತ್ತೆ 2 ಕಂಪನಿಗೆ ವಿಮಾನ ಸೇವೆಗೆ ಅನುಮತಿ