ಮುಖ್ಯ ನ್ಯಾಯಮೂರ್ತಿ ವಿರುದ್ಧವೇ ಸುಪ್ರೀಂ ಕೋರ್ಟ್ ಮೊರೆ

First Published May 8, 2018, 9:18 AM IST
Highlights

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾ| ದೀಪಕ್ ಮಿಶ್ರಾ ಅವರ ವಿರುದ್ಧ ರಾಜ್ಯಸಭಾ ಸಭಾಪತಿಗಳು ಮಹಾಭಿಯೋಗ (ವಾಗ್ದಂಡನೆ) ನಿರ್ಣಯ ಮಂಡನೆಗೆ ಅವಕಾಶ ನಿರಾಕರಿಸಿರುವುದರ ವಿರುದ್ಧ ಕಾಂಗ್ರೆಸ್‌ನ ಇಬ್ಬರು ಸಂಸದರು ಸುಪ್ರೀಂ ಕೋರ್ಟ್ ಕದ ಬಡಿದಿದ್ದಾರೆ. 

ನವದೆಹಲಿ: ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾ| ದೀಪಕ್ ಮಿಶ್ರಾ ಅವರ ವಿರುದ್ಧ ರಾಜ್ಯಸಭಾ ಸಭಾಪತಿಗಳು ಮಹಾಭಿಯೋಗ (ವಾಗ್ದಂಡನೆ) ನಿರ್ಣಯ ಮಂಡನೆಗೆ ಅವಕಾಶ ನಿರಾಕರಿಸಿರುವುದರ ವಿರುದ್ಧ ಕಾಂಗ್ರೆಸ್‌ನ ಇಬ್ಬರು ಸಂಸದರು ಸುಪ್ರೀಂ ಕೋರ್ಟ್ ಕದ ಬಡಿದಿದ್ದಾರೆ. 

ಅವಕಾಶ ನಿರಾಕರಣೆಗೆ ಸಭಾಪತಿಗಳು ನೀಡಿರುವ ಕಾರಣ ಸಂಪೂರ್ಣ ಅಪ್ರಸ್ತುತ ಮತ್ತು ಕಾನೂನಾತ್ಮಕವಾಗಿ ಸಮರ್ಥನೀಯವಲ್ಲದ್ದು ಎಂದು ಅರ್ಜಿದಾ ರರು ವಾದಿಸಿದ್ದಾರೆ. ಹಿರಿಯ ವಕೀಲರೂ ಆದ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರು ಕಾಂಗ್ರೆಸ್ ಸಂಸದರಾದ ಪ್ರತಾಪ್ ಸಿಂಗ್ ಬಾಜ್ವಾ ಹಾಗೂ ಅಮೀ ಹರ್ಶ ದ್ರಾಯ್ ಯಾಗ್ನಿಕ್ ಅವರ ಪರ ಸೋಮ ವಾರ ಸುಪ್ರೀಂ ಕೋರ್ಟ್‌ನ ನ್ಯಾ| ಜೆ. ಚಲಮೇಶ್ವರ ಹಾಗೂ ನ್ಯಾ| ಸಂಜಯ್ ಕಿಶನ್ ಕೌಲ್ ಅವರ ಪೀಠದ ಮುಂದೆ ಈ ಅರ್ಜಿ ಸಲ್ಲಿಸಿ ತುರ್ತು ವಿಚಾರಣೆ ಬಯಸಿದರು.

ಆದರೆ, ಈ ಅರ್ಜಿಯ ವಿಚಾರಣೆ ತಕ್ಷಣವೇ ಕೈಗೆತ್ತಿಕೊಳ್ಳಲು ನಿರಾಕರಿಸಿದ ಪೀಠ, ‘ಯಾವ ಅರ್ಜಿಯು ಯಾವ ಪೀಠದ ಮುಂದೆ ಬರಬೇಕು ಎಂಬುದನ್ನು ಸಿಜೆಐ ನ್ಯಾ| ದೀಪಕ್ ಮಿಶ್ರಾ ಅವರೇ ನಿರ್ಧರಿಸುತ್ತಾರೆ. ಅವರ ಮುಂದೆ ಯೇ ಹೋಗಿ’ ಎಂದು ಸೂಚಿಸಿದರು. ನಂತರ ನಾಳೆ ಬನ್ನಿ ಎಂದು ಹೇಳಿದರು. ಆದರೆ ನಂತರದಲ್ಲಿ ಅರ್ಜಿ ವಿಚಾರಣೆಗಾಗಿ 5 ಸದಸ್ಯರ ಸಾಂವಿಧಾನಿಕ ಪೀಠವನ್ನು ರಚಿಸಿ, ಅದಕ್ಕೆ ಅರ್ಜಿ ವಿಚಾರಣೆ ಹೊಣೆ ಹೊರಿಸಲಾಯಿತು.

click me!