
ಬೆಂಗಳೂರು : ಕಾಂಗ್ರೆಸ್‌ನ 12 ಮಂದಿ ಶಾಸಕರಿಗೆ ಗಾಳ ಹಾಕಿರುವ ಬಿಜೆಪಿಯ ತಂತ್ರಕ್ಕೆ ನಾಲ್ಕು ಪ್ರತಿತಂತ್ರ ಹೆಣೆಯಲು ಕಾಂಗ್ರೆಸ್ ನಾಯಕತ್ವ ಮುಂದಾಗಿದೆ. ಬಿಜೆಪಿ ಸಂಪರ್ಕಿಸಿರುವ ಕಾಂಗ್ರೆಸ್ ಶಾಸಕರನ್ನು ನೇರವಾಗಿ ಹೈಕಮಾಂಡ್ ಮೂಲಕವೇ ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಮತ್ತು ತೀರಾ ಗೊಂದಲ ಸೃಷ್ಟಿಸುತ್ತಿರುವ ಶಾಸಕರಿಗೆ ಶಿಸ್ತುಕ್ರಮದ ಖಡಕ್ ಎಚ್ಚರಿಕೆ ನೀಡುವ ಚಿಂತನೆ ನಡೆಸಿದೆ.
ಈ ಕುರಿತ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಶುಕ್ರವಾರ ಮಾತುಕತೆ ನಡೆಸಿದರು. ಅನಂತರ ಈ ನಾಯಕರು ಕೆಪಿಸಿಸಿ ಅಧ್ಯಕ್ಷರ ದಿನೇಶ್ ಗುಂಡೂರಾವ್ ಅವರೊಂದಿಗೂ ಚರ್ಚಿಸಿ ದ್ದಾರೆ.
ಈ ನಾಯಕರ ಚರ್ಚೆ ವೇಳೆ ಕಾಂಗ್ರೆಸ್ ಶಾಸಕರಿಗೆ ಆಮಿಷವೊಡ್ಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಆದಾಯ ತೆರಿಗೆ ಇಲಾಖೆ ಹಾಗೂ ಎಸಿಬಿಗೆ ದೂರು ನೀಡಲು ನಿರ್ಧರಿಸಲಾಗಿದೆ ಹಾಗೂ ಬಿಜೆಪಿ ನಡೆಸಿರುವ ಕುತಂತ್ರವನ್ನು ಸಾಕ್ಷ್ಯಾಧಾರ ಸಹಿತ ಮಾಧ್ಯಮಗಳ ಮುಂದಿಡಲು ತೀರ್ಮಾನಿಸಲಾಗಿದೆ.
ಈ ತೀರ್ಮಾನದಂತೆ ಕಾಂಗ್ರೆಸ್ ಶಾಸಕರಿಗೆ ಅಮಿಷವೊಡ್ಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದೆ. ಇದಲ್ಲದೆ, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿದ್ದು, ಶಾಸಕರ ಹಿತ ಕಾಯುವ ಭರವಸೆಯನ್ನು ಹೈಕಮಾಂಡ್ ಮೂಲಕವೇ ಕೊಡಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಇದಲ್ಲದೆ, ಪಕ್ಷಕ್ಕೆ ವಿಪರೀತ ಹಾನಿ ಮಾಡುತ್ತಿರುವ ಹಾಗೂ ಇತರೆ ಶಾಸಕರನ್ನು ಆಪರೇಷನ್ ಕಮಲಕ್ಕೆ ಪ್ರೇರೇಪಿ ಸುತ್ತಿರುವ ನಿರ್ದಿಷ್ಟ ಶಾಸಕರನ್ನು ಗುರುತಿಸಲು ಮತ್ತು ಅಂತಹ ಶಾಸಕರ ಮೇಲೆ ಕೂಡಲೇ ಕಠಿಣ ಕ್ರಮಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.