
ವಿಜಯಪುರ[ಅ.02]: ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರನ್ನು ಪ್ರವಾಹದ ಸಂದರ್ಭದಲ್ಲಿ ನಡುಗಡ್ಡೆ ಪ್ರದೇಶದಲ್ಲಿ ಬಿಡಬೇಕು. ಆಗ ಅವರಿಗೆ ಸಂತ್ರಸ್ತರ ನೋವು ಅರಿವಾಗುತ್ತದೆ ಎಂದು ಮಾಜಿ ಸಚಿವ ಡಾ.ಎಂ.ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬ್ಯುಸಿ ಇದ್ದಿದ್ದರಿಂದ ಕರ್ನಾಟಕ ನೆರೆ ಬಗ್ಗೆ ಮೋದಿ ಟ್ವೀಟ್ ಇಲ್ಲ: ಅಂಗಡಿ ವಿವಾದ
ಸುದ್ದಿಗಾರರ ಜತೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಪ್ರವಾಹ ಸಂತ್ರಸ್ತರ ಸಂಕಷ್ಟವನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಸರ್ಕಾರಕ್ಕೆ ಪ್ರವಾಹ ಸಂತ್ರಸ್ತರ ಶಾಪ ತಟ್ಟಲಿದೆ ಎಂದರು. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಆಗದಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿದ್ದು ಏನು ಪ್ರಯೋಜನ? ಸಿಎಂ ಸ್ಥಾನದಲ್ಲಿ ನಾನಿದ್ದರೆ ಇಷ್ಟೊತ್ತಿಗೆ ರಾಜೀನಾಮೆ ಬಿಸಾಕುತ್ತಿದ್ದೆ ಎಂದು ವಾಗ್ದಾಳಿ ನಡೆಸಿದರು.
ಸಂತ್ರಸ್ತರಿಗೆ ತಾತ್ಕಾಲಿಕ ಶೆಡ್ ನಿರ್ಮಿಸಲು ಸಾಧ್ಯವಾಗದ ಬಿಜೆಪಿಯವರಿಗೆ ಶಾಶ್ವತ ಸೂರು ಒದಗಿಸಲು ಹೇಗೆ ಸಾಧ್ಯ?. ಅಧಿಕಾರ ಹೋಗುವ ಹೆದರಿಕೆಯಿಂದ ಸಚಿವ ಸಂಪುಟದಲ್ಲಿ ಇರುವವರು ನೆರೆ ಸಂತ್ರಸ್ತರ ಪರ ದನಿ ಎತ್ತುತ್ತಿಲ್ಲ.
'ಬಿಹಾರಕ್ಕೆ ಮಿಡಿದ ಮೋದಿ 52 ಇಂಚಿನ ಎದೆ, ಕರ್ನಾಟಕ ವಿಚಾರದಲ್ಲಿ ಕಲ್ಲುಬಂಡೆ ಆಗಿದ್ದೇಕೆ?'
ಧೈರ್ಯವಿಲ್ಲ:
ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡಲು ಬಿಜೆಪಿ ಸರ್ಕಾರದ ಬಳಿ ಹಣವಿಲ್ಲ. 2 ಇಲ್ಲವೆ 3 ಸಾವಿರ ರುಪಾಯಿ ಪರಿಹಾರ ನೀಡಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಬಳಿ ತೆರಳಿ ಪರಿಹಾರ ಕೇಳುವ ಧೈರ್ಯ ಸಿಎಂ ಯಡಿಯೂರಪ್ಪ ಅವರಿಗೆ ಇಲ್ಲ. ಉತ್ತರ ಕರ್ನಾಟಕ ಬಲ ನೀಡಿದೆ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಆದರೆ ಪ್ರವಾಹ ಸಂತ್ರಸ್ತರಿಗೆ ಅವರು ಸ್ಪಂದಿಸುತ್ತಿಲ್ಲ ಎಂದು ದೂರಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.