ಸ್ಪೀಕರ್‌ ಮುಂದೆ ಸಿದ್ದರಾಮಯ್ಯ ಇಟ್ಟ ಬೇಡಿಕೆ, ಬೆಚ್ಚಿ ಬೀಳುವ ಸರದಿ ಅತೃಪ್ತರದ್ದು!

By Web DeskFirst Published Jul 24, 2019, 4:16 PM IST
Highlights

ದೋಸ್ತಿ ಸರಕಾರ ಅಂತ್ಯ ಕಂಡಿದೆ. ಒಂದು ಕಡೆ ಬಿಜೆಪಿ ಅಧಿಕಾರದ ಹಕ್ಕು ಸ್ಥಾಪನೆಗೆ ಮುಂದಾಗುತ್ತಿದೆ. ಸರ್ಕಾರ ಕೆಡವಲು ಪ್ರಮುಖ ಕಾರಣರಾದ ರಾಜೀನಾಮೆ ಕೊಟ್ಟ ಅತೃಪ್ತ ಶಾಸಕರಿಗೆ ತಕ್ಕ ಪಾಢ ಕಲಿಸಿವವರೆಗೂ ಮಾಜಿ ಸಿಎಂ ಸಿದ್ದರಾಂಯ್ಯ ಮಾತ್ರ ಹಿಂದೆ ಸರಿಯುವಂತೆ ಕಾಣುತ್ತಿಲ್ಲ.

ಬೆಂಗಳೂರು(ಜು. 24)  ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರ ಉರುಳಿದ ನಂತರ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಮಾಡಿಕೊಂಡಿರುವ ಮನವಿ ನಿಜಕ್ಕೂ ಅತೃಪ್ತರು ಮಾತ್ರವಲ್ಲ ಮುಂದೆ ಪಕ್ಷ ತೊರೆಯುವ ಆಲೋಚಜನೆಯಲ್ಲಿರುವವರಿಗೂ ನಡುಕ ಹುಟ್ಟಿಸಿದೆ.

ಅತೃಪ್ತರ ಮೇಲೆ ಕ್ರಮ ತೆಗೆದುಕೊಳ್ಳಬೇಕು... ಪದೇ ಪದೇ ಪಕ್ಷ ತೊರೆಯುವವರಿಗೆ ಪಾಠವಾಗುವಂತಹ ನಿರ್ಧಾರ ತೆಗೆಗೆದುಕೊಳ್ಳಬೇಕು. ಪಕ್ಷದಿಂದ ಗೆದ್ದು ಬಂದ ಮೇಲೆ ನಿಷ್ಠರಾಗಿರಬೇಕು.  ಪಕ್ಷದ ತತ್ವ ಸಿದ್ಧಾಂತಗಳಿಗೆ ಯಾವಾಗಲೂ ಬದ್ಧರಾಗಿರಬೇಕು. ಅವರೂ ಯಾವುದೇ ಪಕ್ಷದ ಶಾಸಕರಾದರೂ ಸರಿಯೇ..? ಇವತ್ತು ನಮ್ಮ ಪಕ್ಷ, ನಾಳೆ ಬೇರೆ ಪಕ್ಷಕ್ಕೂ ಇದೇ ಆಗಬಹುದು. ಹಾಗಾಗಿ ಒಂದು ಮಾದರಿ ಐತಿಹಾಸಿಕ ದಾಖಲೆಯಾಗುವಂತಹ ನಿರ್ಧಾರ  ತೆಗೆದುಕೊಳ್ಳಿ ಎಂದಿದ್ದಾರೆ.

ಪೂರ್ಣಾವಧಿ ಮುಗಿಸಿದವರು ಕೇವಲ ಮೂವರು: ಉಳಿದವರೆಲ್ಲಾ ಹಿಂಗೆ ಬಂದು, ಹಂಗೆ ಹೋದರು!

ರಾಜೀನಾಮೆ ಕೊಟ್ಟು ಈ ರೀತಿ ಗೊಂದಲ ಸೃಷ್ಟಿಮಾಡುವವರನ್ನು ಅನತರ್ಹ ಮಾಡಿಬಿಡಿ. ಮುಂದೆ ಯಾವ ಪಕ್ಷದ ಯಾರೂ ಇಂಥ ಹೆಜ್ಜೆ ಇಡದಂತಹ ಪಾಠ ಕಲಿಸಿ ಎಂದು ಕೇಳಿಕೊಂಡಿದ್ದಾರೆ.

 

click me!