ತೈಲ ಬೆಲೆ ತುಲನೆ ಮಾಡಿದ ತರೂರ್ ಗೆ ಬಂದ ಕಮೆಂಟ್ ಇವು..!

First Published Jun 2, 2018, 5:43 PM IST
Highlights

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಆರೋಪಿಸಿದ್ದಾರೆ.

ನವದೆಹಲಿ(ಜೂ.2): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಇಳಿಕೆಯಾಗುತ್ತಿದ್ದರೂ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಸುತ್ತಿಲ್ಲ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಆರೋಪಿಸಿದ್ದಾರೆ.

ಈ ಕುರಿತು ಫೇಸ್‌ಬುಕ್ ನಲ್ಲಿ ಫೋಟೋ ಶೇರ್ ಮಾಡಿರುವ ಶಶಿ ತರೂರ್, 2013 ರಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಒಂದು ಬ್ಯಾರೆಲ್‌ಗೆ 109 ಯುಎಸ್ ಡಾಲರ್ ಇತ್ತು, ಆದರೂ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ ಕೇವಲ 74 ರೂ ಇತ್ತು. ಆದರೆ 2018 ರಲ್ಲಿ ಕಚ್ಚಾ ತೈಲದ ಬೆಲೆ ಒಂದು ಬ್ಯಾರೆಲ್‌ಗೆ 80 ಯುಎಸ್ ಡಾಲರ್ ಆಗಿದ್ದರೂ, ಮೋದಿ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್ ಬೆಲೆ 85 ರೂ. ಇದೆ ಎಂದು ತುಲನೆ ಮಾಡಿದ್ದರು.

ಇನ್ನು ಶಶಿ ತರೂರ್ ಫೋಟೋಗೆ ಕಮೆಂಟ್ ಮಾಡಿರುವ ಹಲವರು, ನಾವು ಬೇಕಾದರೆ ಪೆಟ್ರೋಲ್ ಗೆ 100 ರೂ ಕೊಡಲು ಸಿದ್ದ ಆದರೆ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ನೋಡಲು ಸಿದ್ದರಿಲ್ಲ ಎಂದು ಲೇವಡಿ ಮಾಡಿದ್ದಾರೆ. ಇನ್ನೂ ಕೆಲವರು ನಾವು ತಿಂಗಳಿಗೆ ಮೊಬೈಲ್ ಬಿಲ್ ನಲ್ಲಿ 500-1000 ರೂ ಉಳಿಸುತ್ತಿದ್ದು, ಅದರಲ್ಲೇ ಪೆಟ್ರೋಲ್ ತುಂಬಿಸಿಕೊಳ್ಳುವುದಾಗಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇದೇ ವೇಳೆ ಶಶಿ ತರೂರ್ ಅವರ ಪೋಸ್ಟ್ ಗೆ ಬೆಂಬಲ ಸೂಚಿಸಿ ಕೆಲವರು ಕಮೆಂಟ್ ಮಾಡಿದ್ದಾರೆ.

click me!