‘ಪಿಎಂ ಮಾಡಿದ್ರೂ ರಮೇಶ್  ಬರಲ್ಲ, ಸರ್ಕಾರದ ವ್ಯಾಲಿಡಿಟಿ ಇನ್ನೂ ಮುಗಿದಿಲ್ಲ’

By Web DeskFirst Published Jul 13, 2019, 5:51 PM IST
Highlights

ರಾಜಕಾರಣದ ಹೈಡ್ರಾಮಾ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತ ಸಾಗುತ್ತಿದ್ದರೆ ಅತ್ತ ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕ, ಶಾಸಕ ಸತೀಶ್ ಜಾರಕಿಹೊಳಿ ಸಮ್ಮಿಶ್ರ ಸರಕಾರಕ್ಕೆ ವ್ಯಾಲಿಡಿಟಿ ನೀಡಿದ್ದಾರೆ.

ಬೆಳಗಾವಿ[ಜು. 13]  ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರದ ಎರಡು ಕಣ್ಣು. ಬೆಳಗಾವಿಯಿಂದ ರಮೇಶ್ ಮತ್ತು ಮಹೇಶ್ ಬಿಟ್ಟು ಬೇರೆ ಶಾಸಕರು ರಾಜೀನಾಮೆ ನೀಡುವುದಿಲ್ಲ. ರಮೇಶ್ ಜಾರಕಿಹೊಳಿ ಕಳೆದುಕೊಂಡಿರುವ ವಸ್ತು ಇನ್ನೂ ಸಿಕ್ಕಿಲ್ಲ. ವಸ್ತು ಸಿಕ್ಕಿಲ್ಲಾ ಅಂತಾನೆ ಇನ್ನೂ ಗದ್ದಲ ಹಿಡಿದಿರುವುದು ..ಸಿಗುತ್ತೋ.. ಇಲ್ಲವೋ ಕಾದುನೋಡಬೇಕಿದೆ ಎಂದು ಕಾಂಗ್ರೆಸ್ ನಾಯಕ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಅಣ್ಣತಮ್ಮಂದಿರು ಅನ್ನೋದಕ್ಕಿಂತ ನಮಗೆ ಪಕ್ಷ ಮುಖ್ಯ. ಉಪಚುನಾವಣೆಯಲ್ಲಿ ಸಹೋದರರ ನಡುವೆ ಸಮರ ಖಚಿತವಾಗಿದೆ. ಗೋಕಾಕ್ ನಲ್ಲಿ ನಮ್ಮ ಪಕ್ಷದಿಂದ ನಾವು ಹೋರಾಟ ಮಾಡುತ್ತೇವೆ ಪಕ್ಷ ಸಂಘಟಿಸುತ್ತೆವೆ ಎಂದು ಪರೋಕ್ಷವಾಗಿ ಲಖನ್ ಸ್ಪರ್ಧೆ ಬಗ್ಗೆ ಹೇಳಿದರು.

MTB ಇಟ್ಟ ಬೇಡಿಕೆಗೆ ಬೆಚ್ಚಿಬಿದ್ರು, ಸಿದ್ದು ಮನೆಯ ಸುದೀರ್ಘ ಮಾತುಕತೆ ವಿಫಲ

ರಮೇಶ್ ಪತ್ನಿ ಅಥವಾ ಅಳಿಯ ಅಂಬಿರಾವ್ ನಿಂತ್ರೂ ಲಖನ್ ಗೋಕಾಕ್ ನಲ್ಲಿ ಸ್ಪರ್ಧಿಸುವುದು ಖಚಿತ. ರಮೇಶ್ ಮೂರು ಜನ ಅಳಿಯಂದಿರಗಾಗಿ ರಾಜೀನಾಮೆ ಕೊಟ್ಟಿದ್ದು ನಿಜ‌. ನಾವು ರಿವರ್ಸ್ ಆಪರೇಷನ್ ಮಾಡಬೇಕೆಂಬ ಅಗತ್ಯ ಇಲ್ಲ ಎಂದು ಹೇಳಿದರು.

ನಮ್ಮವರು ವಾಪಸ್ ಬಂದರೆ ಸರಕಾರ ಉಳಿಯುತ್ತದೆ. ಈಗಾಗಲೇ ನಾಲ್ಕು ಜನ ಶಾಸಕರು ಬೆಂಗಳೂರಿನಲ್ಲೇ ಇದ್ದಾರೆ.  ಮುಂಬೈನಲ್ಲಿರುವ ಇಬ್ಬರು ಶಾಸಕರು ಬಂದ್ರೆ ಸರ್ಕಾರ ಸೇಫ್ ಆಗಿ ಮುಂದುವರಿಯಲಿದೆ.  ಸರ್ಕಾರ ಉಳಿಸಿಕೊಳ್ಳುವ ಕೆಲಸ ಎಲ್ಲರೂ ಮಾಡುತ್ತಿದ್ದಾರೆ. ಈ ಸರ್ಕಾರದಿಂದಲೂ ತಪ್ಪಾಗಿರಬಹುದು. ಈಗ ಅದನ್ನ ಸರಿಪಡಿಸಿಕೊಳ್ಳಲಾಗುತ್ತಿದೆ ಎಂದರು.

ಬಿಜೆಪಿ ಪದೇ ಪದೇ ಸರ್ಕಾರ ಬೀಳಿಸುವ ಕೆಲಸ ಮಾಡಿಕೊಂಡು ಬರ್ತಾಯಿದೆ. ಬಿಜೆಪಿ ಪಕ್ಷ ಅಧಿಕಾರ ತರಲು ಅಮಿತ್ ಶಾ ಪ್ರಯತ್ನ ಮಾಡುತ್ತಿದ್ದಾರೆ‌. ನಾವು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೇವೆ‌. ಬೇರೆಯವರನ್ನ ಸಚಿವರನ್ನ ಮಾಡಿದ್ರೂ, ಇಲ್ಲ ನಮ್ಮನ್ನ ಮುಂದುವರಿಸಿದರೂ ನಾವು ಸಿದ್ದರಿದ್ದೇವೆ. ಮುಂಬೈನಿಂದ ಒಬ್ಬ ಶಾಸಕರನ್ನ ಕರೆದುಕೊಂಡು ಹೋಗಿ ಬರಲು ವಿಮಾನಕ್ಕೆ ಹತ್ತು ಲಕ್ಷ  ರೂ.ಖರ್ಚಾಗುತ್ತೆ.  ಅಲ್ಲಿ ಹೋಟೆಲ್ ಬುಕ್ಕಿಂಗ್ ಸೇರಿದಂತೆ ಎಲ್ಲವನ್ನೂ ಬಿಜೆಪಿ ನೋಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.

ಅತೃಪ್ತ ಶಾಸಕರಿಗೆ ಇನ್ನೂ ಕಾಲಾವಕಾಶ ಇದೆ. ರಮೇಶ್ ಜಾರಕಿಹೊಳಿಯನ್ನ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಮಾಡಿದ್ರೂ ಬರುವುದಿಲ್ಲ ಎಂದು ರಮೇಶ್ ಮೇಲೆ ವಾಗ್ದಾಳಿ ಮಾಡಿದರು.

click me!