ವಾಯುದಾಳಿ ಸಾಕ್ಷಿ ಕೇಳುತ್ತಿದೆ ಕಾಂಗ್ರೆಸ್: ಪಕ್ಷ ತೊರೆದ ನಾಯಕ!

By Web DeskFirst Published Mar 10, 2019, 2:11 PM IST
Highlights

ಬಾಲಾಕೋಟ್ ಸಾಕ್ಷಿ ಕೇಳಿದ ಕೈಗೆ ಸ್ವಪಕ್ಷೀಯರಿಂದಲೇ ಗುದ್ದು| ಕಾಂಗ್ರೆಸ್ ನಡೆಯಿಂದ ಬೇಸತ್ತು ರಾಜೀನಾಮೆ ನೀಡಿದ ನಾಯಕ| ಪಕ್ಷ ತೊರೆದ ಬಿಹಾರ ಕಾಂಗ್ರೆಸ್‌ ವಕ್ತಾರ ವಿನೋದ್‌ ಶರ್ಮಾ| ‘ನಾಯಕರ ನಡೆಯಿಂದ ಜನ ನಮ್ಮನ್ನು ಪಾಕಿಸ್ತಾನಿಯರಂತೆ ನೋಡುತ್ತಾರೆ'| ಸೈನಿಕರ ಶೌರ್ಯ ಪ್ರಶ್ನಿಸುವುದು ಸರಿಯಲ್ಲ ಎಂದ ವಿನೋದ್ ಶರ್ಮಾ|

ಪಾಟ್ನಾ(ಮಾ.10): ಬಾಲಾಕೋಟ್ ವಾಯುದಾಳಿ ಕುರಿತು ಸಾಕ್ಷಿ ಕೇಳುತ್ತಿರುವ ಕಾಂಗ್ರೆಸ್ ಪಕ್ಷದ ನಡೆಯನ್ನು ವಿರೋಧಿಸಿ, ಬಿಹಾರ ಕಾಂಗ್ರೆಸ್ ಮುಖಂಡರೊಬ್ಬರು ಪಕ್ಷ ತ್ಯಜಿಸಿದ್ದಾರೆ.

ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಉಗ್ರರ ನೆಲೆಗಳ ಮೇಲೆ ವಾಯುಪಡೆಯು ನಡೆಸಿದ ದಾಳಿಯ ಸಾಕ್ಷ್ಯಗಳನ್ನು ಬಿಡುಗಡೆ ಮಾಡುವಂತೆ ಕೇಳಿದ್ದರಿಂದ ಬೇಸರವಾಗಿದ್ದು, ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಬಿಹಾರ ಕಾಂಗ್ರೆಸ್‌ ವಕ್ತಾರ ವಿನೋದ್‌ ಶರ್ಮಾ ಹೇಳಿದ್ದಾರೆ.

Cong leader resigns over his party seeking proof of IAF’s Balakot airstrike

Read story | https://t.co/H21tK8G89P pic.twitter.com/zdKQZkaNsI

— ANI Digital (@ani_digital)

ನಾಯಕರ ಅಪ್ರಬುದ್ಧ ಹೇಳಿಕೆಗಳಿಂದಾಗಿ ಕಾಂಗ್ರೆಸ್ ಸದಸ್ಯರನ್ನು ಜನ ಭಯೋತ್ಪಾದಕರಂತೆ ನೋಡುತ್ತಿದ್ದಾರೆ ಎಂದು ಆರೋಪಿಸಿರುವ ವಿನೋದ್‌ ಶರ್ಮಾ, ಈ ಹಿನ್ನೆಲೆಯಲ್ಲಿ ತಾವು ಪಕ್ಷದ ಪ್ರಾಥಮಿಕ ಸದಸ್ಯತ್ವ ಸೇರಿದಂತೆ, ಎಲ್ಲ ಹುದ್ದೆಗಳಿಗೂ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಸೈನಿಕರ ಶೌರ್ಯವನ್ನೇ ಪ್ರಶ್ನೆ ಮಾಡುವ ಮೂಲಕ ಪಕ್ಷದ ಕೆಲ ನಾಯಕರು ಸೈನಿಕರ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿನೋದ್‌ ಶರ್ಮಾ ಆರೋಪಿಸಿದ್ದಾರೆ.

click me!