ರೇವಣ್ಣ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ| ಹಾಡಿನ ಮೂಲಕವೇ ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡ ಯುವಕ| ರೇವಣ್ಣ ವಿರುದ್ಧ ಹಾಡು ಬರೆದ ಅಜಿತ್ ಬೊಪ್ಪನಳ್ಳಿ| ಅಜಿತ್ ಬೊಪ್ಪನಹಳ್ಳಿ ಸುವರ್ಣನ್ಯೂಸ್ ಉದ್ಯೋಗಿ| ಸುದ್ದಿಗೊಂದು ಗುದ್ದು ಕೊಡುವ ಸಾಹಿತ್ಯ ರಚಿಸುವುದರಲ್ಲಿ ಅಜಿತ್ ಎತ್ತಿದ ಕೈ| ಮೊನಚಾದ, ಹರಿತ ಸಾಹಿತ್ಯ ರಚಿಸಿ ರೇವಣ್ಣರ ನಡೆ ಟೀಕಿಸಿದ ಅಜಿತ್| ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆದ ಅಜಿತ್ ಹಾಡು| ಇತರೆ ನ್ಯೂಸ್ ಚಾನೆಲ್‌ಗಳಲ್ಲಿ ಜಿತ್ ಹಾಡಿನದ್ದೇ ಸುದ್ದಿ|
ಬೆಂಗಳೂರು(ಮಾ.10): ಇದು ಸೋಷಿಯಲ್ ಮಿಡಿಯಾ ಜಮಾನಾ. ಯಾರು, ಯಾವಾಗ, ಎಲ್ಲಿ, ಏನಂದರು ಎಂಬುದು ಯಾರಿಂದಲೂ ಮುಚ್ಚಿಡಲು ಸಾಧ್ಯವಿಲ್ಲ. ಅದರಲ್ಲೂ ರಾಜಕೀಯ ನೇತಾರರ ಹೇಳಿಕೆಗಳು ಕ್ಷಣಾರ್ಧದಲ್ಲಿ ರಾಜ್ಯ, ದೇಶದ ಮೂಲೆ ಮೂಲೆಗಳಲ್ಲಿ ತಲುಪಿ ಬಿಡುತ್ತವೆ.
ದಿವಂಗತ ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್ ಕುರಿತು ಕೇವಲವಾಗಿ ಮಾತನಾಡಿದ್ದ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ರೇವಣ್ಣ ಅವರನ್ನು ತೀವ್ರ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ. ಅದರಂತೆ ಸುವರ್ಣನ್ಯೂಸ್ ಉದ್ಯೋಗಿಯಾಗಿರುವ ಅಜಿತ್ ಬೊಪನಳ್ಳಿ ಅವರು ರೇವಣ್ಣ ಕುರಿತು ಬರೆದ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅದ್ಭುತ ಪದಗಳ ಜೋಡಣೆಯ ಹಾಡಿನ ಮೂಲಕವೇ ಸುವರ್ಣನ್ಯೂಸ್‌ನ ಪ್ರೋಗ್ರಾಂ ಪ್ರೊಡ್ಯುಸರ್ ಆಗಿರುವ ಅಜಿತ್ ಬೊಪನಳ್ಳಿ ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುದ್ದಿಗೊಂದು ಗುದ್ದು ಕೊಡುವ ಸಾಹಿತ್ಯ ರಚಿಸುವುದರಲ್ಲಿ ನಮ್ಮ ಅಜಿತ್ ಅವರದ್ದು ಎತ್ತಿದ ಕೈ. ಮೊನಚಾದ, ಹರಿತ ಸಾಹಿತ್ಯ ರಚಿಸಿ ರೇವಣ್ಣ ಅವರ ನಡೆ ಟೀಕಿಸಿದ ಅಜಿತ್ ಹಾಡು ಅದೆಷ್ಟು ವೈರಲ್ ಆಗಿದೆ ಎಂದರೆ ರಾಜ್ಯದ ಇತರೆ ಪ್ರಮುಖ ನ್ಯೂಸ್ ಚಾನೆಲ್ ಗಳಲ್ಲೂ ಅಜಿತ್ ಹಾಡು ಸದ್ದು ಮಾಡುತ್ತಿದೆ.