
ಗದಗ: ಸಚಿವ ಸ್ಥಾನ ಒತ್ತಾಯ ಪೂರ್ವಕವಾಗಿ ಪಡೆದುಕೊಳ್ಳುವುದಲ್ಲ. ರಾಜೀನಾಮೆ, ಪ್ರತಿಭಟನೆ ಮೂಲಕ ಒತ್ತಡ ಹೇರುವುದು ಸೂಕ್ತವಲ್ಲ. ಪಕ್ಷ ಹಾಗೂ ಪ್ರಜಾಪ್ರಭುತ್ವದ ಹಿತ ದೃಷ್ಟಿಯಿಂದ ಸಚಿವ ಸ್ಥಾನಕ್ಕೆ ಪ್ರತಿಭಟನೆ ಒಳ್ಳೆಯದಲ್ಲ ಎಂದು ಕಾಂಗ್ರೆಸ್ ನಿಂದ ಸಚಿವ ಸ್ಥಾನ ವಂಚಿತರಲ್ಲೊಬ್ಬರಾಗಿರುವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ನನ್ನ ಮೇಲಿನ ಅಭಿಮಾನದಿಂದ ಕೆಲ ಸ್ಥಳೀಯ ಸಂಸ್ಥೆ ಸದಸ್ಯರು ರಾಜೀನಾಮೆಗೆ ಮುಂದಾಗಿದ್ದಾರೆ. ದಯವಿಟ್ಟು ರಾಜಿನಾಮೆ ನೀಡಿದವರು ಹಿಂಡೆದುಕೊಳ್ಳಲು ಕೈಮುಗಿದು ವಿನಂತಿಸಿಕೊಂಡರು. ಸಚಿವ ಸ್ಥಾನ ಸಿಗದಿದ್ರು ಸೇವಾ ಅವಕಾಶ ಸಿಕ್ಕ ಸಮಾಧಾನ ನನ್ನದು. ಮಂತ್ರಿಗಿರಿಗಿಂತ ಎತ್ತರ ಸ್ಥಾನದಲ್ಲಿ ನನ್ನ ಜನ ನನ್ನನ್ನು ನೋಡುತ್ತಾರೆ. ನನಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಹಿರಿಯರೆ ಉತ್ತರಿಸಬೇಕು ಎಂದರು.
ಇನ್ನು ಬಾಕಿ ಉಳಿದ 6 ಸ್ಥಾನದಲ್ಲಿ ಸಚಿವ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿ ನಾನಿಲ್ಲ. ನಾನೂ ಸಚಿವ ಸ್ಥಾನದ ನಿರೀಕ್ಷೆಯಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ರು.
ಗದಗ ಕ್ಷೇತ್ರದಲ್ಲಿ ಸಾತ್ವಿಕ ರಾಜಕಾರಣದ ಪ್ರಯತ್ನವನ್ನು ಮಾಡಿಕೊಂಡು ಬಂದಿದ್ದದ್ದೇನೆ. ಆದರೆ ಇದಕ್ಕೆ ವಿರುದ್ಧವಾದ ವಾತಾವರಣ ಬಿಜೆಪಿ ನಾಯಕರಿಂದ ವ್ಯಕ್ತವಾಗುತ್ತಿದೆ. ಜನರನ್ನು ಭಯಭೀತರನ್ನಾಗಿಸಯವ ಜೊತೆಗೆ ಗೌರವಕ್ಕೆ ಧಕ್ಕೆ ತರುವ ಪ್ರಯತ್ನಈ ಹಿಂದೆ ನಡೆದಿರಲಿಲ್ಲ. ಚುನಾವಣಾ ವೇಳೆ ಗದಗಿನ 50 ಜನರಿಗೆ ಐಟಿ ದಾಳಿ ನಡೆಸಲಾಗಿದೆ. ಈ ದಾಳಿಯ ಹಿ<ದೆ ಬಿಜೆಪಿಗರೇ ಇದ್ದಾರೆ ಎಂದು ಆರೋಪ ಮಾಡಿದರು. ನಿಮಗೆ ಚುನಾವಣೆಯಲ್ಲಿ ದುಡ್ಡು ಕೊಡಲಿಲ್ಲ ಅಂತ ದಾಳಿ ಮಾಡಲು ಪಟ್ಟಿ ಕೊಟ್ಟಿರಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.