ರಮೇಶ್‌ ಜಾರ​ಕಿ​ಹೊಳಿ ನಿಗೂಢ ನಡೆ : ಶೀಘ್ರವೇ ಹೊಸ ಘೋಷಣೆ

Published : Dec 26, 2018, 07:30 AM IST
ರಮೇಶ್‌ ಜಾರ​ಕಿ​ಹೊಳಿ ನಿಗೂಢ ನಡೆ : ಶೀಘ್ರವೇ ಹೊಸ ಘೋಷಣೆ

ಸಾರಾಂಶ

ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ರಮೇಶ್ ಜಾರಕಿಹೊಳಿ ನಡೆ ಈಗ ನಿಗೂಢವಾಗಿದೆ. ರಮೇಶ್ ಜಾರಕಿಹೊಳಿ ಹೊಸ ಪ್ಲಾನ್ ಮಾಡುತ್ತಿದ್ದು, ಶೀಘ್ರವೇ ಈ ಬಗ್ಗೆ ಘೋಷಣೆ ಹೊರಡಿಸುವ ಸಾಧ್ಯತೆ ಇದೆ. 

ಬೆಂಗಳೂರು :  ಮತ್ತೊಬ್ಬ ಅತೃಪ್ತ ರಮೇಶ್‌ ಜಾರ​ಕಿ​ಹೊಳಿ ಅವರ ನಡೆ ನಿಗೂ​ಢ​ವಾ​ಗಿದೆ. ಕಳೆದ ಎರಡು ದಿನ​ಗ​ಳಿಂದ ಬೆಂಗ​ಳೂ​ರಿ​ನಲ್ಲೇ ಇದ್ದ ರಮೇಶ್‌ ಜಾರ​ಕಿ​ಹೊಳಿ ಅವರು ಶಾಸಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಅವರು ನಗ​ರಕ್ಕೆ ಆಗ​ಮಿ​ಸಿದ ಬೆನ್ನಲ್ಲೇ ಗೋಕಾ​ಕ್‌ಗೆ ತೆರ​ಳಿ​ದ​ರು.

ರಮೇಶ್‌ ಜಾರ​ಕಿ​ಹೊಳಿ ಅವರು ಸಿದ್ದ​ರಾ​ಮ​ಯ್ಯ ಸೇರಿ​ದಂತೆ ಯಾವುದೇ ಕಾಂಗ್ರೆಸ್‌ ನಾಯ​ಕ​ರನ್ನು ಸಂಪ​ರ್ಕಿ​ಸಿಲ್ಲ. ಕೆಲ ಕಾಂಗ್ರೆಸ್‌ ಶಾಸ​ಕ​ರೊಂದಿಗೆ ಅವರು ಮಾತು​ಕತೆ ನಡೆ​ಸಿ​ದ್ದಾರೆ ಎನ್ನ​ಲಾ​ಗಿ​ದ್ದರೂ, ಅವರ ನಡೆ ನಿಗೂ​ಢ​ವಾ​ಗಿದೆ. 

ಕೆಲ ಮೂಲ​ಗಳ ಪ್ರಕಾರ ರಮೇಶ್‌ ಜಾರ​ಕಿ​ಹೊಳಿ ಅವರ ತಂಡವು ತಮ್ಮ ಸಂಖ್ಯೆ​ಯನ್ನು ಹೆಚ್ಚಿ​ಸಿ​ಕೊ​ಳ್ಳುವ ಪ್ರಯ​ತ್ನ​ದ​ಲ್ಲಿದ್ದು, ಈ ಪ್ರಯತ್ನ ಶೀಘ್ರವೇ ಫಲ ಕೊಡ​ಲಿದೆ. ಕೆಲವೇ ದಿನ​ಗ​ಳಲ್ಲಿ ಈ ಬಗ್ಗೆ ಬಹಿ​ರಂಗ ಘೋಷ​ಣೆಯೂ ಈ ತಂಡ​ದಿಂದ ಹೊರಬೀಳ​ಲಿದೆ ಎನ್ನ​ಲಾ​ಗು​ತ್ತಿದೆ.

ಆದರೆ, ಇದನ್ನು ಕಾಂಗ್ರೆಸ್‌ ಮೂಲ​ಗಳು ಅಲ್ಲ​ಗ​ಳೆ​ದಿದ್ದು, ರಮೇಶ್‌ ಜಾರ​ಕಿ​ಹೊಳಿ ಅವ​ರೊಂದಿಗೆ ಗುರು​ತಿ​ಸಿ​ಕೊ​ಳ್ಳಲು ಯಾವುದೇ ಕಾಂಗ್ರೆಸ್‌ ಶಾಸ​ಕರು ತಯಾ​ರಿಲ್ಲ. ಶೀಘ್ರವೇ ರಮೇಶ್‌ ಜಾರ​ಕಿ​ಹೊಳಿ ಅವ​ರನ್ನು ಸಮಾ​ಧಾ​ನ​ಪ​ಡಿ​ಸುವ ಕಾರ್ಯ​ವನ್ನು ರಾಜ್ಯ ನಾಯ​ಕರು ನಡೆ​ಸ​ಲಿ​ದ್ದಾರೆ ಎನ್ನು​ತ್ತ​ವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

30 ವಿದ್ಯಾರ್ಥಿಗಳ ಸಾವಿಗೆ ಸಚಿವ ಶಾ ನೇರ ಹೊಣೆ, ಕೆಪಿಎಸ್‌ಸಿ ಅಕ್ರಮಕ್ಕೆ ಯಾರು ಹೊಣೆ? ಮಧು ಬಂಗಾರಪ್ಪ ಹೇಳಿದ್ದೇನು?
KPSC Scam: ಎಇಇ ನೇಮಕದಲ್ಲೂ ಅಕ್ರಮ! ಬಗೆದಷ್ಟೂ ಹೊರಬರುತ್ತಿದೆ ಕೆಪಿಎಸ್ಸಿ ಕರ್ಮಕಾಂಡ