ಪುಲ್ಬಾಮಾ 'ಅಪಘಾತ' ಎಂದ ದಿಗ್ವಿಜಯ್ ಸಿಂಗ್‌ಗೆ ಟ್ವಿಟ್ಟರ್‌ನಲ್ಲಿ ಆಘಾತ!

Published : Mar 05, 2019, 03:15 PM IST
ಪುಲ್ಬಾಮಾ 'ಅಪಘಾತ' ಎಂದ ದಿಗ್ವಿಜಯ್ ಸಿಂಗ್‌ಗೆ ಟ್ವಿಟ್ಟರ್‌ನಲ್ಲಿ ಆಘಾತ!

ಸಾರಾಂಶ

ಅಷ್ಟಕ್ಕೂ ದಿಗ್ವಿಜಯ್ ಸಿಂಗ್ ಯಾಕೆ ಬಾಯ್ಬಿಡ್ತಾರೆ?| ಬಾಯ್ಬಿಟ್ರೆ ಪಾಕ್ ಪರ, ಭಾರತ ವಿರೋಧಿ ಹೇಳಿಕೆಯನ್ನೇಕೆ ನೀಡ್ತಾರೆ?| ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಅಪಘಾತ ಎಂದು ಕರೆದ ಹಿರಿಯ ಕಾಂಗ್ರೆಸ್ ನಾಯಕ| ದಿಗ್ವಿಜಯ್ ಟ್ವೀಟ್ ಗೆ ನೆಟಿಜನ್ ಗಳ ಭಾರೀ ಆಕ್ರೋಶ|

ಭೋಪಾಲ್(ಮಾ.05): ತಮ್ಮ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡಿದ್ದಕ್ಕೆ, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅಭಿನಂದಿಸಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ.

ಇದೀಗ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಅಪಘಾತ ಎಂದು ಹೇಳಿರುವ ದಿಗ್ವಿಜಯ್ ಸಿಂಗ್ ಟ್ವೀಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪುಲ್ವಾಮಾ ದುರ್ಘಟನೆಯನ್ನು ಕೇಂದ್ರ ಸರ್ಕಾರ ತನ್ನ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದು, ಈ ಕುರಿತು ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ದಿಗ್ವಿಜಯ್ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಸರಣಿ ಟ್ವಿಟ್ ಮಾಡಿರುವ ದಿಗ್ವಿಜಯ್, ಪ್ರತಿ ಟ್ವೀಟ್ ನಲ್ಲೂ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು 'ಅಪಘಾತ' ಎಂದು ಉಲ್ಲೇಖಿಸಿದ್ದಾರೆ. ದಿಗ್ವಿಜಯ್ ಅವರ ಟ್ವೀಟ್ ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿರುವ ನೆಟಿಜನ್ಸ್, ಭಯೋತ್ಪಾದಕ ದಾಳಿ ಕಾಂಗ್ರೆಸ್‌ಗೆ ಕೇವಲ ಅಪಘಾತವಾಗಿ ಕಾಣುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಇನ್ನು ದಿಗ್ವಿಜಯ್ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ, ಮಾಜಿ ಸೇನಾಧ್ಯಕ್ಷ ಜನರಲ್ ವಿ.ಕೆ. ಸಿಂಗ್, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರದ್ದೋ ಹತ್ಯೆಯೋ ಅಥವಾ ಅಪಘಾತವೋ ಎಂದು ಪ್ರಶ್ನಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ