ಡಿ.ಕೆ.ಶಿವಕುಮಾರ್​ಗೂ ಕಾದಿದ್ಯಾ ಜೈಲು ಶಿಕ್ಷೆ.?

First Published Jun 4, 2018, 3:38 PM IST
Highlights

ಆದಾಯ ತೆರಿಗೆ ಕಾಯಿದೆ 276c ಮತ್ತು 277 ರ ಪ್ರಕಾರ ಬಳ್ಳಾರಿ ಉದ್ಯಮಿ ವಿಶ್ವಾಸ್ ಲಾಡ್ ವಿರುದ್ಧ ಇದೀಗ ಮಹತ್ತರ ತೀರ್ಪು ಹೊರಬಿದ್ದಿದ್ದು, ಇದೇ ಕಾಯ್ದೆಯ ಅಡಿಯಲ್ಲಿ  ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. 
 

ಬೆಂಗಳೂರು :  ಆದಾಯ ತೆರಿಗೆ ಕಾಯಿದೆ 276c ಮತ್ತು 277 ರ ಪ್ರಕಾರ ಬಳ್ಳಾರಿ ಉದ್ಯಮಿ ವಿಶ್ವಾಸ್ ಲಾಡ್ ವಿರುದ್ಧ ಇದೀಗ ಮಹತ್ತರ ತೀರ್ಪು ಹೊರಬಿದ್ದಿದ್ದು, ಇದೇ ಕಾಯ್ದೆಯ ಅಡಿಯಲ್ಲಿ  ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. 

 ಆದಾಯ ತೆರಿಗೆ ಕಾಯಿದೆ ಉಲ್ಲಂಘನೆ ಮಾಡಿದ ಆರೋಪದ ಅಡಿಯಲ್ಲಿ  ಇನ್ನೂ ಕೆಲ ಮುಖಂಡರ ವಿರುದ್ಧವೂ ಕೂಡ ಇದೇ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದ್ದರಿಂದ ಈ ಮುಖಂಡರೆಲ್ಲರಿಗೂ ಕೂಡ ಶಿಕ್ಷೆ ಕಾದಿದೆಯಾ ಎನ್ನುವ ಪ್ರಶ್ನೆ ಮೂಡಿದೆ.  

ತೆರಿಗೆಗಳ್ಳರು ಜೈಲುಶಿಕ್ಷೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಾರೆ ಎಂಬ ಭಾವನೆ ಇರುವಾಗಲೇ ಇದೀಗ ಸಂತೋಷ್ ಲಾಡ್ ಸಂಬಂಧಿ ವಿಶ್ವಾಸ್ ಲಾಡ್ ವಿರುದ್ಧ ಮಹತ್ವದ ತೀರ್ಪು ಪ್ರಕಟವಾಗಿದೆ. 4 ವರ್ಷಗಳ ಕಾಳ ಜೈಲು ಶಿಕ್ಷೆ ಹಾಗೂ ೨ ಲಕ್ಷ ದಂಡ ವಿಧಿಸಲಾಗಿದೆ. ಇಡೀ ರಾಷ್ಟ್ರಕ್ಕೆ ಮಾದರಿಯಾಗಬಲ್ಲ ತೀರ್ಪನ್ನು ಬೆಂಗಳೂರಿನ  ಆರ್ಥಿಕ ಅಪರಾಧಗಳ ನ್ಯಾಯಾಲಯ ನೀಡಿದೆ. 

ಐಟಿ ಕಾಯ್ದೆ ಉಲ್ಲಂಘನೆ : ಬಳ್ಳಾರಿ ಉದ್ಯಮಿಗೆ ಜೈಲು ಶಿಕ್ಷೆ

click me!