BIG BREAKING : ಐಟಿ ಕಾಯ್ದೆ ಉಲ್ಲಂಘಿಸಿದ ಬಳ್ಳಾರಿ ಉದ್ಯಮಿಗೆ ಜೈಲು ಶಿಕ್ಷೆ - ನ್ಯಾಯಾಲಯದಿಂದ ಮಹತ್ತರ ತೀರ್ಪು

First Published Jun 4, 2018, 3:25 PM IST
Highlights

ಆದಾಯ ತೆರಿಗೆ ಕಾಯಿದೆ ಉಲ್ಲಂಘನೆ ಮಾಡಿದ  ಬಳ್ಳಾರಿ ಉದ್ಯಮಿಗೆ ಜೈಲು ಶಿಕ್ಷೆ ವಿಧಿಸಿ ಮಹತ್ತರ ತೀರ್ಪು ನೀಡಲಾಗಿದೆ. 

ಬೆಂಗಳೂರು :  ಆದಾಯ ತೆರಿಗೆ ಕಾಯಿದೆ ಉಲ್ಲಂಘನೆ ಮಾಡಿದ  ಬಳ್ಳಾರಿ ಉದ್ಯಮಿಗೆ ಜೈಲು ಶಿಕ್ಷೆ ವಿಧಿಸಿ ಮಹತ್ತರ ತೀರ್ಪು ನೀಡಲಾಗಿದೆ. ಕಾಂಗ್ರೆಸ್ ಮುಖಂಡ ಸಂತೋಷ್ ಲಾಡ್ ಸಂಬಂಧಿ ಉದ್ಯಮಿ ವಿಶ್ವಾಸ್ ಲಾಡ್ ಗೆ 4 ವರ್ಷ ಜೈಲು ಶಿಕ್ಷೆ  ಹಾಗೂ 2 ಲಕ್ಷ ದಂಡ ವಿಧಿಸಿ ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯ ಮಹತ್ತರ ತೀರ್ಪು  ನೀಡಿದೆ. 

ಆದಾಯ ತೆರಿಗೆ ಕಾಯಿದೆ 276c ಮತ್ತು 277 ರ ಪ್ರಕಾರ ತೀರ್ಪು  ನೀಡಲಾಗಿದೆ. ಕರ್ನಾಟಕದ ಇತಿಹಾಸದಲ್ಲೇ ಐಟಿ ಕಾಯಿದೆ ಉಲ್ಲಂಘನೆಗಾಗಿ ದಾಖಲೆಯ ಪ್ರಮಾಣದಲ್ಲಿ ಶಿಕ್ಷೆ ವಿಧಿಸಲಾಗಿದೆ.  ತೆರಿಗೆ (ಟಿಡಿಎಸ್) ಪಾವತಿಸದೇ ವಂಚನೆ ಆರೋಪ ಹೊತ್ತಿದ್ದ ವಿಶ್ವಾಸ್ ಲಾಡ್ ವಿರುದ್ಧ  ಐಟಿ ರಿಟರ್ನ್ ಸಂಬಂಧ ಸುಳ್ಳು ದಾಖಲೆ ಸೃಷ್ಟಿಸಿದ್ದ ಆರೋಪ ಸಾಬೀತಾದ ಹಿನ್ನೆಲೆ ಶಿಕ್ಷೆ ನೀಡಲಾಗಿದೆ. 

ವಿಶ್ವಾಸ್ ಲಾಡ್ ವಿರುದ್ಧ ಐಟಿ ಕಾಯಿದೆ ಸೆಕ್ಷನ್ 276C(1) ಹಾಗು 277 ರ ಅಡಿ ದಾಖಲಾಗಿದ್ದ ಪ್ರಕರಣ ದಾಖಲಾಗಿತ್ತು. 

click me!