ನೋಟು ಅಮಾನ್ಯೀಕರಣ : ದಾಖಲಾತಿ ರದ್ದಾದ ಕಂಪನಿಗಳಿಂದ ಕೋಟ್ಯಂತರ ರು. ಜಮೆ

First Published Jun 4, 2018, 2:31 PM IST
Highlights

ದೇಶದಲ್ಲಿ ನೋಟು ಅಮಾನ್ಯೀಕರಣದ ಬಳಿಕವೇ  73 ಸಾವಿರ ದಾಖಲಾತಿ ರದ್ದಾದ ಕಂಪನಿಗಳಿಂದ 23 ಸಾವಿರ ಕೋಟಿ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು  ದಾಖಲೆಯನ್ನು ಬಿಡುಗಡೆ ಮಾಡಲಾಗಿದೆ. 

ನವದೆಹಲಿ :   ದೇಶದಲ್ಲಿ ನೋಟು ಅಮಾನ್ಯೀಕರಣದ ಬಳಿಕವೇ  73 ಸಾವಿರ ದಾಖಲಾತಿ ರದ್ದಾದ ಕಂಪನಿಗಳಿಂದ 23 ಸಾವಿರ ಕೋಟಿ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಸರ್ಕಾರದಿಂದ  ದಾಖಲೆಯನ್ನು  ಬಿಡುಗಡೆ ಮಾಡಲಾಗಿದೆ. 

ಯಾವುದೇ ರೀತಿಯಾದ ವ್ಯವಹಾರವನ್ನು ನಡೆಸದೆಯೂ ಕೂಡ ಈ ಕಂಪನಿಗಳು ಈ ಪ್ರಮಾಣದಲ್ಲಿ ಹಣವನ್ನು ಅಕ್ರಮವಾಗಿ ಜಮೆ ಮಾಡಿವೆ.  ಅತ್ಯಧಿಕ  ಸಮಯದಿಂದಲೂ ಕೂಡ ದೇಶದಲ್ಲಿ ಒಟ್ಟು 2.26 ಕಂಪನಿಗಳು ತಮ್ಮ ವ್ಯವಹಾರವನ್ನು ನಡೆಸುತ್ತಿಲ್ಲವಾದ್ದರಿಂದ ಅವುಗಳ ದಾಖಲಾತಿಯನ್ನು ರದ್ದು ಮಾಡಲಾಗಿತ್ತು ಎಂದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹೇಳಿದೆ. 

ಇದರಲ್ಲಿ ಕೆಲವು ಕಂಪನಿಗಳು ಅಕ್ರಮವಾಗಿ ಹಣಕಾಸು ವ್ಯವಹಾರದಲ್ಲಿ ಪಾಲ್ಗೊಂಡು ಕೋಟ್ಯಂತರ ಹಣವನ್ನು ನೋಟು ಅಮಾನ್ಯೀಕರಣದ ಬಳಿಕ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿವೆ.  

ಇಂತಹ ಒಟ್ಟು 73 ಸಾವಿರ ದಾಖಲಾತಿ ರದ್ದಾದ ಕಂಪನಿಗಳು 24 ಸಾವಿರ ಕೋಟಿ ಹಣವನ್ನು ವಿವಿಧ ಬ್ಯಾಂಕ್ ಗಳಲ್ಲಿ ಜಮೆ ಮಾಡಿವೆ.  ಈಗಾಗಲೇ ಈ ಸಂಬಂಧ ಕೆಲವು ಕಂಪನಿಗಳ ವಿರುದ್ಧ ತನಿಖೆಯನ್ನೂ ಆರಂಭ ಮಾಡಲಾಗಿದೆ ಎಂದು ಸಚಿವಾಲಯವು ತಿಳಿಸಿದೆ. 

ದೇಶದಲ್ಲಿ ಕಳೆದ 2016ರಲ್ಲಿ  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ  500 ಹಾಗೂ 1000 ರು. ಮುಖ ಬೆಲೆಯ ನೋಟುಗಳನ್ನು ಅಮಾನ್ಯ ಮಾಡಿ ಆದೇಶ ಹೊರಡಿಸಿತ್ತು. 

click me!