
ಬಾಗಲಕೋಟೆ[ಜು. 17] ನಾಳೆ ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ಬಿಜೆಪಿಗೆ ಕುಮಾರಸ್ವಾಮಿ ರಿವರ್ಸ್ ಆಪರೇಷನ್ ಮಾಡಿದ್ರಾ? ಎಬ್ಬುವ ಪ್ರಶ್ನೆ ಮೂಡುತ್ತಿದೆ.
ಬಾಗಲಕೋಟೆಯಲ್ಲಿ ಮಾಜಿ ಸಚಿವ ಬಸವರಾಜ್ ರಾಯರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ. ನಾಳೆ ಬಿಜೆಪಿಯವರು ನಾಲ್ಕೈದು ಜನ ಬಂದು ನಮಗೆ ಬೆಂಬಲಿಸಬಹುದು ಎಂದು ಹೇಳಿಕೆ ನೀಡಿದ್ದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.
ವಿಶ್ವಾಸ ಮತ ಗೆದ್ದೆ ಗೆಲ್ತೇವೆ.. ಸಿಎಂ ಸೂತ್ರ
ಸಿಎಂ ಕುಮಾರಸ್ವಾಮಿ ಅಲ್ಲಿಯೂ ಆಪರೇಷನ್ ಮಾಡಿದ್ದೀವಿ ಅಂತಿದ್ದಾರೆ. ನಾಳೆ ಬಿಜೆಪಿಯವರೇ ಬಂದು ನಮ್ಮ ಪರ ಕೈ ಎತ್ತಿ ಓಟ್ ಹಾಕಬಹುದು. ಸಿಎಂ ಮಾತು ಉಲ್ಲೇಖಿಸಿ ವಿಶ್ವಾಸ ಮತ ಯಾಚನೆ ವೇಳೆ ಬಿಜೆಪಿಯವರಿಂದಲೂ ಬೆಂಬಲ ಸಿಗಬಹುದೆಂದ ರಾಯರೆಡ್ಡಿ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಅವರೇ ಹೇಳ್ತಿದ್ದಾರೆ.
ಈ ಕುರಿತು ಸಿಎಂ ಕುಮಾರಸ್ವಾಮಿ ಸಹ ಪ್ರಯತ್ನ ಮಾಡಿರಬಹುದು. ನಾಳೆ ವಿಶ್ವಾಸ ಮತ ಯಾಚನೆ ವೇಳೆ ಏನು ಬೇಕಾದ್ರೂ ಆಗಬಹುದು. ಬಿಜೆಪಿ ಬೆಂಬಲ ಸಿಗಬಹುದು ಇಲ್ಲವೆ ನಮ್ಮವರೇ ಬಂದು ಬೆಂಬಲವನ್ನೂ ನೀಡಬಹುದು. ವಿಶ್ವಾಸ ಮತಯಾಚನೆ ವೇಳೆ ಏನಾಗಲಿದೆ ಅನ್ನೋದನ್ನ ಕಾದು ನೋಡಿ ಎಂದು ವಿಶ್ವಾಸದಲ್ಲೇ ಮಾತನಾಡಿದ ರಾಯರೆಡ್ಡಿ ಅಚ್ಚರಿ ಮೂಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.