ನಕಲಿ ಬಿಲ್ ಹಾಕಿ ನಗೆಪಾಟಲಾದ ಕಾಂಗ್ರೆಸ್ ಮುಖಂಡ, ಇದೆಲ್ಲಾ ಬೇಕಿತ್ತಾ?

By Web DeskFirst Published Oct 14, 2018, 10:34 PM IST
Highlights

ಈ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ತೆಗಳುವ ಭರದಲ್ಲಿ ಒಂದೆಲ್ಲಾ ಒಂದು ಎಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾರೆ. ನಕಲಿ ಪೆಟ್ರೋಲ್ ಬಂಕ್ ಬಿಲ್ ಒಂದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗೆ ಕಾಲೆಳೆಸಿಕೊಂಡಿದ್ದಾರೆ.

ನವದೆಹಲಿ[ಅ.14] ಪೆಟ್ರೋಲ್  ಮತ್ತು ಡಿಸೇಲ್ ದರ ದುಬಾರಿಯಾಗಿದೆ. ಇದಕ್ಕೆ ಮೋದಿ ಅವರೆ ಕಾರಣ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿಕೊಂಡು ಬಂದಿದ್ದಾರೆ. ಆದರೆ ಇದೀಗ ಬಾಲಾಜಿ ಪೆಟ್ರೋಲಿಯಂ ಎನ್ನುವ ಬಂಕ್ ನ ಬಿಲ್ ವೊಂದನ್ನು ಸಿಂಘ್ವಿ ಶೇರ್ ಮಾಡಿದ್ದಾರೆ. ನಿಮಗೆ ತೈಲ ದರ ಇಳಿಯಬೇಕೆ ಹಾಗಾದರೆ ನರೇಂದ್ರ ಮೋದಿಗೆ ವೋಟ್ ಮಾಡಬೇಡಿ ಎಂಬ ಸ್ಲೋಗನ್ ಇದೆ.

ಆದರೆ ಇದರ ಬೆನ್ನು ಹತ್ತಿರುವ ಮಾಧ್ಯಮಗಳು ಸಿಂಘ್ವಿ ಎಡವಟ್ಟು ಮಾಡಿಕೊಂಡಿರುವುದನ್ನು ಬಹಿರಂಗ ಮಾಡಿದ್ದಾರೆ. ನಕಲಿ ಯಾವುದು, ಅಸಲಿ ಯಾವುದು ಎಂಬುದ್ನು ತೆರೆದಿರಿಸಿದ್ದು ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಮಾನ ಕಳೆದುಕೊಂಡಿದೆ. ಪೆಟ್ರೋಲಿಯಂ ಖಾತೆ ಹೊಂದಿರುವ ಧರ್ಮೇಂದ್ರ ಪ್ರಧಾನ್ ಸರಿಯಾದ ತಿರುಗೇಟನ್ನೇ ನೀಡಿದ್ದಾರೆ.

 

pic.twitter.com/gZ9u2TYuMe

— Abhishek Singhvi (@DrAMSinghvi)

Have come across fake petrol pump bills with political captions against the Govt & Hon’ble PM; Sharing pictures of the real bill issued by Vs. the fake one & also a clarification from HPCL itself. Requesting all to share the right message around. pic.twitter.com/VXgcwKhJGb

— Dharmendra Pradhan (@dpradhanbjp)
click me!