ಚುನಾವಣೆಯಲ್ಲಿ ಹಣ ಬೆಂಬಲ ಮತ್ತು ಗನರ್ವರ್ ಕುಮ್ಮಕ್ಕಿನಿಂದ ಬಿಜೆಪಿ ಗೆದಿದ್ದು: ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ

By Suvarna Web DeskFirst Published Apr 27, 2017, 3:12 AM IST
Highlights

ದೆಹಲಿ ಪಾಲಿಕೆ ಚುನಾವಣೆಯ ಓಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಪ್ರಗತಿ ಕಂಡಿದ್ದು ಸೋಲು ಎಂದು ಭಾವಿಸುವುದಿಲ್ಲ.ಹಣ ಬೆಂಬಲ ಮತ್ತು ಅಲ್ಲಿನ ಗನರ್ವರ್ ಕುಮ್ಮಕ್ಕಿನಿಂದ ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಮುಂದಿನ ಚುನಾವಣಾ ಮೈತ್ರಿ ಬಗ್ಗೆ ಯಾವುದೇ ಮಾತುಕತೆಗಳು ನಡೆದಿಲ್ಲ, ಬೈ ಎಲೆಕ್ಷನ್ ಗೆಲುವು ಮುಂದಿನ ಕಾಂಗ್ರೆಸ್ ಚುನಾವಣಾ ಗೆಲುವಿಗೆ ನಾಂದಿಯಾಗಿದೆ. ಇದರಿಂದ ಭಯಗೊಂಡ ಬಿಜೆಪಿಯ ರಾಷ್ಟ್ರೀಯ ನಾಯಕರೇ ಮಿಷನ್ 150ಯನ್ನು ಮಿಷನ್ 50ಕ್ಕೆ ಇಳಿಸಿದ್ದಾರೆ.

ನವದೆಹಲಿ(ಎ.27): ದೆಹಲಿ ಪಾಲಿಕೆ ಚುನಾವಣೆಯ ಓಟ್ ಹಂಚಿಕೆಯಲ್ಲಿ ಕಾಂಗ್ರೆಸ್ ಪ್ರಗತಿ ಕಂಡಿದ್ದು ಸೋಲು ಎಂದು ಭಾವಿಸುವುದಿಲ್ಲ.ಹಣ ಬೆಂಬಲ ಮತ್ತು ಅಲ್ಲಿನ ಗನರ್ವರ್ ಕುಮ್ಮಕ್ಕಿನಿಂದ ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಮುಂದಿನ ಚುನಾವಣಾ ಮೈತ್ರಿ ಬಗ್ಗೆ ಯಾವುದೇ ಮಾತುಕತೆಗಳು ನಡೆದಿಲ್ಲ, ಬೈ ಎಲೆಕ್ಷನ್ ಗೆಲುವು ಮುಂದಿನ ಕಾಂಗ್ರೆಸ್ ಚುನಾವಣಾ ಗೆಲುವಿಗೆ ನಾಂದಿಯಾಗಿದೆ. ಇದರಿಂದ ಭಯಗೊಂಡ ಬಿಜೆಪಿಯ ರಾಷ್ಟ್ರೀಯ ನಾಯಕರೇ ಮಿಷನ್ 150ಯನ್ನು ಮಿಷನ್ 50ಕ್ಕೆ ಇಳಿಸಿದ್ದಾರೆ.

ಕಾಂಗ್ರೆಸ್ಸಿನಲ್ಲಿ ನೀಡುತಿದ್ದ ಗೌರವವನ್ನು ಬಿಜೆಪಿಯಲ್ಲೂ ನೀಡಿ ಎಂದು ಬ್ರಿಜೇಶ್ ಕಾಳಪ್ಪ ಎಸ್.ಎಂ.ಕೃಷ್ಣರ ಮುಂದಿನ ಪರಿಸ್ಥಿತಿಯ ಬಗ್ಗೆ ಹೇಳಿದ್ದಾರೆ. ಅಲ್ಲದೇ ಬಾಬ್ರಿ ಮಸೀದಿ ವಿಚಾರದ ಕೇಸು ಮರು ವಿಚಾರಣೆ ಕುರಿತು ಮೋದಿ ತಮ್ಮ ಗುರು ಅಡ್ವಾಣಿಗೆ ಇಂತಹ ಗುರುದಕ್ಷಿಣೆ ನೀಡುತ್ತಾರೆಂದು ಗೊತ್ತಿರಲಿಲ್ಲ. ಪ್ರಧಾನಿ ಮೋದಿ ಗುರುವಿಗೆ ಮಾಡಿದ ಬಹುದೊಡ್ಡ ದ್ರೋಹ ಇದಾಗಿದ್ದು, ಅಮಿತ್ ಶಾ, ಯಡಿಯೂರಪ್ಪ, ಜನಾರ್ಧನ ರೆಡ್ಡಿಗೆ ಸಿಕ್ಕ ಕ್ಲೀನ್ ಚಿಟ್ ಅಡ್ವಾಣಿಗೆ ಸಿಗಲಿಲ್ಲವೇಕೆ? ಎಂದು ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ ಮಡಿಕೇರಿಯಲ್ಲಿ ಹೇಳಿಕೆ ನೀಡಿದ್ದಾರೆ 

 

click me!