ತನ್ನ ನೀತಿಯಿಂದಾಗಿ ಜನರ ಪ್ರಾಣ ತೆಗೆಯುವ ಸರ್ಕಾರ ಜಗತ್ತಿನಲ್ಲಿದೆಯೇ? ಜೇಟ್ಲಿಗೆ ಸಿಂಧ್ಯಾ ಪ್ರಶ್ನೆ

By Suvarna Web DeskFirst Published Feb 17, 2017, 10:24 AM IST
Highlights

ಸರ್ಕಾರ ನೋಟು ನೀಷೇಧವನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದ್ದು, ದೇಶದಾದ್ಯಂತ 125 ಜನರು ಪ್ರಾಣ ತೆತ್ತಿದ್ದಾರೆ ಎಂದು ಸಿಂಧ್ಯಾ ಹೇಳಿದ್ದಾರೆ.

ನವದೆಹಲಿ (ಫೆ.17): ನೋಟು ನಿಷೇಧ ಕ್ರಮದ ಕುರಿತು ವಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿಯನ್ನು ಮುಂದುವರೆಸಿವೆ.

ಸರ್ಕಾರದ ನೀತಿಯಿಂದಾಗಿ ಜನರು ಪ್ರಾಣ ಕಳಕೊಂಡ ಯಾವುದಾದರೂ ದೇಶ ಜಗತ್ತಿನಲ್ಲಿದೆಯೇ ಎಂದು ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಕೇಳಿದ್ದಾರೆ.

ಸರ್ಕಾರ ನೋಟು ನೀಷೇಧವನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ವಿಫಲವಾಗಿದ್ದು, ದೇಶದಾದ್ಯಂತ 125 ಜನರು ಪ್ರಾಣ ತೆತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಬೆಳಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಜಗತ್ತಿನಲ್ಲಿ ಯಾವುದೇ ದೇಶವು ಇಂತಹ ದಿಟ್ಟ ಕ್ರಮವನ್ನು ಕೈಗೊಂಡಿಲ್ಲವೆಂದು ಹಣಕಾಸು ಸಚಿವ ಜೇಟ್ಲಿ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದರು.

click me!