ಗಾಂಧೀಜಿ ಹತ್ಯೆಯಿಂದ ಕಾಂಗ್ರೆಸ್'ಗೇ ಹೆಚ್ಚು ಲಾಭ: ಉಮಾ ಭಾರತಿ

By Suvarna Web DeskFirst Published Oct 13, 2017, 1:01 PM IST
Highlights

ಗಾಂಧಿ ಹತ್ಯೆಯಿಂದಾಗಿ ಆರ್'ಎಸ್'ಎಸ್ ಹಾಗೂ ಭಾರತೀಯ ಜನ ಸಂಘ ಸಾಕಷ್ಟು ಸಂಕಷ್ಟ ಎದುರಿಸಿದೆ. ಇದಕ್ಕಾಗಿ ನಾವು ಜೈಲಿಗೂ ಹೋಗಬೇಕಾಯಿತು. ದೇಶವೂ ಗಾಂಧಿ ಹತ್ಯೆಯಿಂದ ನರಳಿತು ಎಂದು ಉಮಾ ಭಾರತಿ ಹೇಳಿದ್ದಾರೆ.

ಅಹಮದಾಬಾದ್(ಅ.13): ಮಹಾತ್ಮ ಗಾಂಧಿ ಹತ್ಯೆಯಿಂದ ಕಾಂಗ್ರೆಸ್‌'ಗೇ ಹೆಚ್ಚು ಲಾಭವಾಗಿದೆ ಎಂದು ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ.

ಗಾಂಧಿ ಹತ್ಯೆಯ ಮರು ತನಿಖೆಗೆ ಸಂಬಂಧಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿರುವ ಕುರಿತು ಪ್ರತಿಕ್ರಿಯಿಸಿದ ಉಮಾ ಭಾರತಿ, ‘ಗಾಂಧೀಜಿಯನ್ನು ಗೋಡ್ಸೆ ಹತ್ಯೆ ಮಾಡಿದಾಗಿನಿಂದಲೂ ಈ ವಿಷಯ ಪ್ರಸ್ತಾಪವಾಗುತ್ತಿದೆ. ಗಾಂಧೀಜಿ ಹತ್ಯೆಯಿಂದ ಕಾಂಗ್ರೆಸ್ ಮಾತ್ರ ಪ್ರಯೋಜನ ಪಡೆದುಕೊಂಡಿದೆ. ಏಕೆಂದರೆ, ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂಬುದು ಗಾಂಧೀಜಿ ಅವರು ಸಲಹೆ ನೀಡಿದ್ದರು’ ಎಂದು ಹೇಳಿದ್ದಾರೆ.

यह विषय आज भी विचार का विषय है कि गांधी जी की हत्या का फायदा किसको हुआ और किसको नुकसान ?? : उमा भारती /2 pic.twitter.com/sbtji2igpS

— Uma Bharti (@umasribharti)

ಗಾಂಧಿ ಹತ್ಯೆಯಿಂದಾಗಿ ಆರ್'ಎಸ್'ಎಸ್ ಹಾಗೂ ಭಾರತೀಯ ಜನ ಸಂಘ ಸಾಕಷ್ಟು ಸಂಕಷ್ಟ ಎದುರಿಸಿದೆ. ಇದಕ್ಕಾಗಿ ನಾವು ಜೈಲಿಗೂ ಹೋಗಬೇಕಾಯಿತು. ದೇಶವೂ ಗಾಂಧಿ ಹತ್ಯೆಯಿಂದ ನರಳಿತು ಎಂದು ಉಮಾ ಭಾರತಿ ಹೇಳಿದ್ದಾರೆ.

click me!