ಜಾಗತಿಕ ಹಸಿವು ಸೂಚ್ಯಂಕದಲ್ಲಿ 2014ರಲ್ಲಿ 55ನೇ ಸ್ಥಾನದಲ್ಲಿದ್ದ ಭಾರತ, 100ನೇ ಸ್ಥಾನಕ್ಕೆ ಕುಸಿತ

By Suvarna Web DeskFirst Published Oct 13, 2017, 12:53 PM IST
Highlights

ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಕಳೆದ ಸಲಕ್ಕಿಂತ 3 ಸ್ಥಾನ ಕುಸಿದಿದ್ದು, 119 ದೇಶಗಳಲ್ಲಿ 100ನೇ ಸ್ಥಾನ ಪಡೆದಿದೆ. 2017ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ಪ್ರಕಟವಾಗಿದ್ದು, ಇದರಲ್ಲಿ ಭಾರತವು ಕೊರಿಯಾ, ಬಾಂಗ್ಲಾದೇಶ, ಇರಾಕ್ ಹಾಗೂ ಶ್ರೀಲಂಕಾಗಿಂತ ಕಳಪೆ ಸಾಧನೆ ಪ್ರದರ್ಶಿಸಿದೆ.

ನವದೆಹಲಿ(ಅ.13): ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಕಳೆದ ಸಲಕ್ಕಿಂತ 3 ಸ್ಥಾನ ಕುಸಿದಿದ್ದು, 119 ದೇಶಗಳಲ್ಲಿ 100ನೇ ಸ್ಥಾನ ಪಡೆದಿದೆ. 2017ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕ ಪ್ರಕಟವಾಗಿದ್ದು, ಇದರಲ್ಲಿ ಭಾರತವು ಕೊರಿಯಾ, ಬಾಂಗ್ಲಾದೇಶ, ಇರಾಕ್ ಹಾಗೂ ಶ್ರೀಲಂಕಾಗಿಂತ ಕಳಪೆ ಸಾಧನೆ ಪ್ರದರ್ಶಿಸಿದೆ.

ಆದರೆ ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಕ್ಕಿಂತ ಭಾರತದ ಪರಿಸ್ಥಿತಿ ಉತ್ತಮವಾಗಿದೆ. ಮೂರು ವರ್ಷಗಳ ಅವಧಿಯಲ್ಲಿ, ಅಂದರೆ 2014ರ ಸ್ಥಿತಿಗತಿಯನ್ನು ಗಮನಿಸಿದರೆ ಭಾರತ 15 ಸ್ಥಾನಗಳಷ್ಟು ಕುಸಿದಿದೆ. 2014ರಲ್ಲಿ ಭಾರತ 55ನೇ ಸ್ಥಾನದಲ್ಲಿತ್ತು. 2016ರಲ್ಲಿ 97ನೇ ಸ್ಥಾನದಲ್ಲಿತ್ತು. ಆದರೆ 2015ರ ನಂತರ ಹಸಿವು ಅಳೆ ಯುವ ಮಾನದಂಡಗಳು ಬದಲಾವಣೆಯಾಗಿದ್ದು, ಹೊಸ ಮಾನ ದಂಡಕ್ಕೆ ಅನುಗುಣವಾಗಿ ಈ ಬಾರಿಯ ಹಸಿವಿನ ಸೂಚ್ಯಂಕ ನಿಗದಿ ಮಾಡಲಾಗಿದೆ.

ಕಳೆದ ಬಾರಿ ಭಾರತಕ್ಕಿಂತ ಒಂದು ಸ್ಥಾನ ಕೆಳಗಿದ್ದ ಉತ್ತರ ಕೊರಿಯಾ ಈ ಬಾರಿ 93ನೇ ಸ್ಥಾನಕ್ಕೆ ಏರಿದೆ. ಅಂತಾರಾಷ್ಟ್ರೀಯ ಆಹಾರ ಸಂಶೋಧನಾ ನೀತಿ ಸಂಸ್ಥೆ ಈ ವರದಿ ಬಿಡುಗಡೆ ಮಾಡಿದೆ.

 

click me!