ಛತ್ತೀಸ್ಗಡ್‌ಗೆ ಭಾಘೆಲ್ ಸಿಎಂ: ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್ ಸಜ್ಜು!

By Web DeskFirst Published 16, Dec 2018, 2:54 PM IST
Highlights

ಛತ್ತೀಸ್ಗಡ್ ನೂತನ ಮುಖ್ಯಮಂತ್ರಿಯಾಗಿ ಭೂಪೇಶ್ ಭಾಘೆಲ್| ಭೂಪೇಶ್ ಭಾಘೇಲ್ ಆಯ್ಕೆ ಅಂತಿಮಗೊಳಿಸಿದ ಕಾಂಗ್ರೆಸ್| ಸಿಎಂ ರೇಸ್‌ನಲ್ಲಿದ್ದರು ಇತರ ಮೂವರು ಹಿರಿಯ ನಾಯಕರು| ನಾಳೆ ಮೂರೂ ರಾಜ್ಯಗಳ ನೂತನ ಮುಖ್ಯಮಂತ್ರಿಗಳ ಪ್ರಮಾಣವಚನ

ರಾಯಪುರ್(ಡಿ.16): ಛತ್ತೀಸ್ಗಡ್ ಕಾಂಗ್ರೆಸ್ ಅಧ್ಯಕ್ಷ ಭೂಪೇಶ್ ಬಾಘೆಲ್  ಅವರನ್ನು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷ  ಇಂದು ಆಯ್ಕೆ ಮಾಡಿದೆ.

ರಾಯಪುರ್‌ದಲ್ಲಿ ಇಂದು ನಡೆದ ಶಾಸಕಾಂಗ ಸಭೆಯ ಬಳಿಕ, ಬಾಘೆಲ್ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಯಿತು.

ರಾಜಸ್ತಾನ , ಮಧ್ಯಪ್ರದೇಶ  ಹಾಗೂ ಛತ್ತೀಸ್ಗಡ್  ನೂತನ ಮುಖ್ಯಮಂತ್ರಿಗಳು ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಭಾರಿ ಶಕ್ತಿ ಪ್ರದರ್ಶಿಸುವ ಸಾಧ್ಯತೆ ಇದೆ.

Last Updated 16, Dec 2018, 2:54 PM IST