ಮೇಟಿ ನಾಟಿಯಾಟದಿಂದ ಕಾಂಗ್ರೆಸ್'ಗೆ ಮುಜುಗರ: ಪಕ್ಷದಿಂದಲೇ ಅಮಾನತು ಮಾಡುವಂತೆ ಹೆಚ್ಚಿದ ಒತ್ತಡ

By Suvarna Web DeskFirst Published Dec 17, 2016, 4:03 AM IST
Highlights

ರಾಸಲೀಲೆ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡ ಎಚ್.ವೈ ಮೇಟಿ ಅವರನ್ನು ಪಕ್ಷದಿಂದ ಅಮಾನತು ಮಾಡುವ ಸಾಧ್ಯತೆ ಇದೆ. ಇಂದು ರಾಹುಲ್ ಗಾಂಧಿ ಬೆಳಗಾವಿಗೆ ಬಂದು ಹೋದ ನಂತರ ಅಮಾನತು ಮಾಡುತ್ತಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.

ಬೆಂಗಳೂರು(ಡಿ.17): ರಾಸಲೀಲೆ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನ ಕಳೆದುಕೊಂಡ ಎಚ್.ವೈ ಮೇಟಿ ಅವರನ್ನು ಪಕ್ಷದಿಂದ ಅಮಾನತು ಮಾಡುವ ಸಾಧ್ಯತೆ ಇದೆ. ಇಂದು ರಾಹುಲ್ ಗಾಂಧಿ ಬೆಳಗಾವಿಗೆ ಬಂದು ಹೋದ ನಂತರ ಅಮಾನತು ಮಾಡುತ್ತಾರೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.

ನಾಟಿಯಾಟವಾಡಿದ ಎಚ್​.ವೈ. ಮೇಟಿ ಸಚಿವ ಸ್ಥಾನ ಕಳೆದುಕೊಂಡಿದ್ದಾಗಿದೆ. ಅಷ್ಟಾದರೇ ಸಾಲದು, ಪಕ್ಷದ ಘನತೆಯನ್ನು ಎತ್ತಿ ಹಿಡಯಬೇಕಾದರೆ. ಪಕ್ಷದಿಂದಲೇ ಮೇಟಿಯನ್ನು ಅಮಾನತು ಮಾಡಬೇಕು ಎಂದು  ಕಾಂಗ್ರೆಸ್​'ನಲ್ಲೇ ಒತ್ತಡ ಹೆಚ್ಚಾಗುತ್ತಿದೆ. ಮೇಟಿ ಮಾನಗೇಡಿ ಕೆಲಸದಿಂದ ಪಕ್ಷಕ್ಕೆ ಮುಜುಗರವಾಗಿದ್ದು, ತಲೆ ಎತ್ತಿ ತಿರುಗದಂತಾಗಿದೆ ಎಂದು ಹಲವು ಶಾಸಕರು ಕೆಪಿಸಿಸಿ ಅಧ್ಯಕ್ಷ ಪರಮೇಶ್ಬರ್ ಅವರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಮೇಟಿ ಒಬ್ಬ ಶಾಸಕರು ಹೀಗಾಗಿ ಹೈಕಮಾಂಡ್ ಸೂಚನೆಯಂತೆ ನಡೆಯುವುದಾಗಿ ಪರಮೇಶ್ವರ್ ಹೇಳಿದ್ದಾರೆ.

ಎಐಸಿಸಿ ಉಪಾಧ್ಯಕ್ಷರಿಗೂ ಮನವಿ ಸಾಧ್ಯತೆ

ಇಂದು ಕುಂದಾನಗರಿ ಬೆಳಗಾವಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ ಇದೆ. ಈ ಸಮಾರಂಭಕ್ಕೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಇದೇ ವೇಳೆ ಶಾಸಕರ ಒಂದು ಗುಂಪು ರಾಹುಲ್ ಗಾಂಧಿ ಭೇಟಿಯಾಗಿ ಮೇಟಿ ಅಮಾನತು ಮಾಡುವಂತೆ ಮನವಿಮಾಡಿಕೊಳ್ಳುವ ಸಾಧ್ಯತೆ ಇದೆ. ಇನ್ನೂ ರಾಹುಲ್ ಗಾಂಧಿ ಬಂದು ಹೋದ ನಂತರ ಮೇಟಿ ಅಮಾನತಿನ ಬಗ್ಗೆ ತೀರ್ಮಾನಿಸೋದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್  ಹೇಳಿದ್ದಾರೆ.

ಒಟ್ಟಿನಲ್ಲಿ ವಯಸ್ಸಲ್ಲದ ವಯಸ್ಸಲ್ಲಿ ಮಾಡಬಾರದ್ದನ್ನು ಮಾಡಿದ ಮೇಟಿಗೆ ಕಾಂಗ್ರೆಸ್​ನಿಂದಲೇ ಗೇಟ್​ಪಾಸ್ ನೀಡುವಂತೆ ಒತ್ತಡ ಹೆಚ್ಚಾಗುತ್ತಿದ್ರೂ, ಸಿಎಂ ಸಿದ್ದರಾಮಯ್ಯ ಮಾತ್ರ  ಸಿಐಡಿ ವಿಚಾರಣೆ ವರದಿಗಾಗಿ ಎದುರು ನೋಡುತ್ತಿದ್ದಾರೆ.

click me!