50 ವರ್ಷ ಮೇಲ್ಪಟ್ಟ ಸರ್ಕಾರಿ ನೌಕರರಿಗೆ ಕಡ್ಡಾಯ ನಿವೃತ್ತಿ

First Published Jul 9, 2018, 7:31 AM IST
Highlights

50 ವರ್ಷ ದಾಟಿದ ಸರ್ಕಾರಿ ಉದ್ಯೋಗಿಗಳಿಗೆ ಕಡ್ಡಾಯ ನಿವೃತ್ತಿ ನೀಡುವ ಕುರಿತು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇದು ರಾಜ್ಯ ನೌಕರರ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಲಖ್ನೋ: ತಮ್ಮ ಕಾರ್ಯವನ್ನು ಸರಿಯಾಗಿ ಮಾಡದ, 50 ವರ್ಷ ದಾಟಿದ ಸರ್ಕಾರಿ ಉದ್ಯೋಗಿಗಳಿಗೆ ಕಡ್ಡಾಯ ನಿವೃತ್ತಿ ನೀಡುವ ಕುರಿತು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇದು ರಾಜ್ಯ ನೌಕರರ ತೀವ್ರ ವಿರೋಧಕ್ಕೆ ಕಾರಣವಾಗಿದೆ.

2018ರ ಮಾಚ್‌ರ್‍ 31ಕ್ಕೆ 50 ವರ್ಷ ಪೂರೈಸಿದ ಎಲ್ಲಾ ಅಧಿಕಾರಿಗಳನ್ನು ಆಯಾ ಇಲಾಖಾ ಮುಖ್ಯಸ್ಥರು ಜುಲೈ 31ರೊಳಗೆ ಪರಿಶೀಲನೆಗೆ ಒಳಪಡಿಸಬೇಕು. ಒಂದು ವೇಳೆ ಅವರು ತಮ್ಮ ಕೆಲಸವನ್ನು ಸೂಕ್ತವಾಗಿ ನಿರ್ವಹಿಸುತ್ತಿಲ್ಲ ಎಂದಾದಲ್ಲಿ ಈ ಕುರಿತು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಬಳಿಕ ಅವರನ್ನು ಸೂಕ್ತ ಆದೇಶದ ಮೂಲಕ ಕಡ್ಡಾಯವಾಗಿ ನಿವೃತ್ತಿಗೊಳಿಸಲಾಗುವುದು ಎಂದು ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಮುಕುಲ್‌ ಸಿಂಘಾಲ್‌ ಆದೇಶ ಹೊರಡಿಸಿದ್ದಾರೆ. ಪ್ರಾಥಮಿಕ ಲೆಕ್ಕಾಚಾರದ ಅನ್ವಯ ಉತ್ತರಪ್ರದೇಶದಲ್ಲಿ 50 ವರ್ಷ ಮೇಲ್ಪಟ್ಟನೌಕರರ ಸಂಖ್ಯೆ 4ಲಕ್ಷಕ್ಕೂ ಹೆಚ್ಚಿದೆ.

ಆದರೆ ಸರ್ಕಾರ ಆದೇಶವನ್ನು ರಾಜ್ಯ ನೌಕರರ ಸಂಘ ತೀವ್ರವಾಗಿ ವಿರೋಧಿಸಿದೆ. ಇಂಥ ಆದೇಶದ ಮೂಲಕ ಸರ್ಕಾರ ಉದ್ಯೋಗಿಗಳನ್ನು ಬೆದರಿಸಲು ಹೊರಟಿದೆ ಎಂದು ಅದು ಟೀಕಿಸಿದೆ.

click me!