
ಹೈದರಾಬಾದ್: ಐಎಎಸ್, ಐಪಿಎಸ್ ರ್ಯಾಂಕ್ ಪಡೆದವರೆಂದರೆ, ಬಹಳ ಬುದ್ಧಿವಂತರು ಎಂಬ ಭಾವನೆ ಎಲ್ಲರಲ್ಲಿ ಇರುತ್ತದೆ.
ಅಚ್ಚರಿ ಎಂದರೆ 2016ನೇ ಬ್ಯಾಚ್‌ನ ಐಪಿಎಸ್ ನೇಮಕಾತಿ ತಂಡ ಇದಕ್ಕೆ ತದ್ವಿರುದ್ಧವಾಗಿದೆ. ಯಾಕೆಂದರೆ, ಹುದ್ದೆಗೆ ನಿಯೋಜನೆಗೂ ಮುನ್ನ ಇವರಿಗೆ ಹೈದರಾಬಾದ್‌ನಲ್ಲಿ ನಡೆದ ಪೊಲೀಸ್ ಅಕಾಡೆಮಿ ಪರೀಕ್ಷೆ ವೇಳೆ 112 ಜನರ ಪೈಕಿ 119 ಜನರು ಒಂದಲ್ಲಾ ಒಂದು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದಾರೆ.
ಇಬ್ಬರು ಪದವಿ ಪಡೆಯಲು ವಿಫಲರಾಗಿದ್ದಾರೆ. ಇದರ ಹೊರತಾಗಿಯೂ ಇವರನ್ನೆಲ್ಲಾ ಇದೀಗ ಪ್ರೊಬೇಶನರಿ ಅಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಇವರೆಲ್ಲಾ ಮುಂದಿನ ಮೂರು ಪ್ರಯತ್ನದಲ್ಲಿ ತಾವು ಅನುತ್ತೀರ್ಣರಾಗಿರುವ ವಿಷಯಗಳಲ್ಲಿ ಉತ್ತೀರ್ಣರಾದರೆ ಅವರು ಸೇವೆಯಲ್ಲಿ ಮುಂದುವರಿಯುತ್ತಾರೆ.
ಇಲ್ಲದಿದ್ದಲ್ಲಿ ಅವರನ್ನು ಸೇವೆಯಿಂದ ಹಿಂದಕ್ಕೆ ಕರೆಸಿಕೊಳ್ಳಲಾಗುತ್ತದೆ. ಈ ರೀತಿಯ ಫಲಿತಾಂಶ ಅಕಾಡೆಮಿ ಇತಿಹಾಸದಲ್ಲೇ ಮೊಟ್ಟಮೊದಲನೆಯದ್ದು. ಹಿಂದೆಂದೂ ಈ ರೀತಿ ಆಗಿರಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.