
ಚಿಕ್ಕಮಗಳೂರು(ಜು.12): ಸ್ಯಾಂಡಲ್'ವುಡ್'ನ ಪ್ರಸಿದ್ಧ ನಟ, ನಿರ್ಮಾಪಕ 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ವಿರುದ್ಧ ತೋಟದ ಮನೆ ಬಾಡಿಗೆ ಹಣ ನೀಡದ ಆರೋಪದಡಿಯಲ್ಲಿ ದೂರು ದಾಖಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಬೈಗೂರು ಗ್ರಾಮದ ದೀಪಕ್ ಮಯೂರ್ ವಾರಾಸ್ದಾರ ಧಾರವಾಹಿ ತಂಡದ ವಿರುದ್ದ ಮನೆ ಮಾಲೀಕ ಆರೋಪ ಮಾಡಿದ್ದಾರೆ. ಬೈಗೂರು ಗ್ರಾಮದಲ್ಲಿರುವ ದೀಪಕ್ ಮನೆಯಲ್ಲಿ ವಾರಸದಾರ ತಂಡ 3 ತಿಂಗಳು ಧಾರವಾಹಿಯ ಚಿತ್ರೀಕರಣ ನಡೆಸಿತ್ತು. ಈ ವೇಳೆ ಚಿತ್ರೀಕರಣಕ್ಕಾಗಿ ತೋಟದ ಮನೆಗೆ ದಿನಕ್ಕೆ 6 ಸಾವಿರ ರೂ. ಬಾಡಿಗೆ ನಿಗದಿಪಡಿಸಲಾಗಿತ್ತು. ಆದರೆ ಬಾಕಿ ಉಳಿದ 1.50 ಲಕ್ಷ ರೂಪಾಯಿ ಬಾಡಿಗೆ ಹಣವನ್ನು ಧಾರಾವಾಹಿ ತಂಡ ಇನ್ನೂ ನೀಡಿಲ್ಲ ಎಂದು ಮನೆ ಮಾಲಿಕ ಆರೋಪಿಸಿದ್ದಾರೆ.
ಅಲ್ಲದೆ ಈ ಧಾರವಾಹಿ ಚಿತ್ರೀಕರಣದ ವೇಳೆ ತೋಟದಲ್ಲಿ ನಷ್ಟ ಉಂಟಾಗಿದೆ ಎಂದು ತಿಳಿಸಿರುವ ಮಾಲಿಕ ಚಿಕ್ಕಮಗಳೂರು ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ಮಾಪಕ ಕಿಚ್ಚ ಸುದೀಪ್ ಮತ್ತು ಸಹ ನಿಮ್ರಾಪಕ ಮಹೇಶ್ ವಿರುದ್ಧ ದೂರು ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.