ನೋಟು ಅಮಾನ್ಯ ಕ್ರಮದ ವಿರುದ್ಧ ದೇಶದಾದ್ಯಂತ ಪ್ರತಿಭಟನೆ

By Suvarna Web DeskFirst Published Dec 26, 2016, 4:51 AM IST
Highlights

ಚುನಾವಣಾ-ಪೂರ್ವ ನೀಡಿರುವ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ಆಗಿರುವ ವೈಫಲ್ಯವನ್ನು ಮರೆಮಾಚಲು ಮೋದಿ ಸರ್ಕಾರವು ನೋಟು ಅಮಾನ್ಯ ಕ್ರಮವನ್ನು ಘೋಷಿಸಿದೆ ಎಂದು ಕಮ್ಯೂನಿಸ್ಟ್ ಪಕ್ಷದ ನಾಯಕ ಸೀತರಾಮ್ ಯೆಚೂರಿ ಹೇಳಿದ್ದಾರೆ.

ಕೋಲ್ಕತಾ (ಡಿ.26): ಕೇಂದ್ರ ಸರ್ಕಾರವು ಕೈಗೊಂಡಿರುವ ನೋಟು ಅಮಾನ್ಯ ಕ್ರಮದ ವಿರುದ್ಧ ಕಮ್ಯೂನಿಸ್ಟ್ ಪಕ್ಷವು ದೇಶದಾದ್ಯಂತ ಪ್ರತಿಭಟನೆಗೆ ಕರೆಕೊಟ್ಟಿದೆ.

ಚುನಾವಣಾ-ಪೂರ್ವ ನೀಡಿರುವ ಆಶ್ವಾಸನೆಗಳನ್ನು ಈಡಡೇರಿಸುವಲ್ಲಿ ಆಗಿರುವ ವೈಫಲ್ಯವನ್ನು ಮರೆಮಾಚಲು ಮೋದಿ ಸರ್ಕಾರವು ನೋಟು ಅಮಾನ್ಯ ಕ್ರಮವನ್ನು ಘೋಷಿಸಿದೆ ಎಂದು ಕಮ್ಯೂನಿಸ್ಟ್ ಪಕ್ಷದ ನಾಯಕ ಸೀತರಾಮ್ ಯೆಚೂರಿ ಹೇಳಿದ್ದಾರೆ.

ನೋಟು ಅಮಾನ್ಯ ಕ್ರಮದ ಬಳಿಕ ಬಂಡವಾಳ ಹೂಡಿಕೆ ನಿಂತುಹೋಗಿದೆ.  ಏಟಿಎಮ್ ಮುಂದೆ ಸರತಿ ಬೆಳೆಯುತ್ತಲೇ ಇದೆ. ಜನರು ನರಳುತ್ತಿದ್ದಾರೆ ಎಂದು ಯೆಚೂರಿ ಕಿಡಿಕಾರಿದ್ದಾರೆ.

ನೋಟು ಅಮಾನ್ಯ ಕ್ರಮದ ವಿರುದ್ಧ ದೇಶದಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಾಲಾಗುವುದು. ಕೇರಳದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಗುವುದು. ತರ ಪ್ರತಿಪಕ್ಷಗಳ ಜೊತೆಯೂ ಇ ಕುರಿತು ಸಮಾಲೋಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

click me!