
ನವದೆಹಲಿ(ಡಿ.26): ಡಿಸೆಂಬರ್ 30ರ ನಂತರವೂ ಬ್ಯಾಂಕ್ ಮತ್ತು ಎಟಿಎಂಗಳಿಂದ ಜನರು ಹಣ ಪಡೆಯುವುದರ ಮೇಲೆ ಹೇರಲಾಗಿರುವ ಮಿತಿಯನ್ನು ಮುಂದುವರಿಯುವ ಸಾಧ್ಯತೆ ಇದೆ. ನೋಟು ರದ್ದು ಪ್ರಕ್ರಿಯೆ ಪೂರ್ಣಗೊಳ್ಳಲು ನಿಗದಿ ಪಡಿಸಿರುವ 50 ದಿನಗಳ ಗಡುವು ಇನ್ನು 5 ದಿನಗಳಲ್ಲಿ ಮುಗಿಯಲಿದೆ. ಆದರೆ ಬೇಡಿಕೆಗೆ ತಕ್ಕಂತೆ ಹೊಸ ನೋಟುಗಳನ್ನು ಮುದ್ರಿಸಿ ಬ್ಯಾಂಕ್'ಗಳಿಗೆ ನೀಡಲು ಆರ್‌ಬಿಐ ಹಾಗೂ ನೋಟು ಮುದ್ರಣ ಘಟಕಗಳಿಗೆ ಸಾಧ್ಯವಾಗಿಲ್ಲ. ಹೊಸ ವರ್ಷದ ಆರಂಭದಲ್ಲಿ ಬ್ಯಾಂಕುಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಲು ಈಗಿನ ಮಿತಿಯನ್ನು ಮುಂದುವರಿಸಬೇಕು ಎಂಬ ಅಭಿಪ್ರಾಯವನ್ನು ಬ್ಯಾಂಕುಗಳು ವ್ಯಕ್ತಪಡಿಸಿವೆ. ಸದ್ಯ ಬ್ಯಾಂಕ್'ಗಳಲ್ಲಿ ಗ್ರಾಹಕರು ವಾರಕ್ಕೆ 24 ಸಾವಿರ ಹಾಗೂ ಎಟಿಎಂಗಳಲ್ಲಿ 2,500 ಪಡೆದುಕೊಳ್ಳಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.